Header Ads
Header Ads
Header Ads
Breaking News

ಕಳಪೆ ಕಾಮಗಾರಿಯಿಂದ ಕೂಡಿದ ತೂಮಿನಾಡು ಕಾಂಕ್ರಿಟ್ ರಸ್ತೆ ವಾಯು ಮಾಲಿನ್ಯದಿಂದ ತತ್ತರಿಸಿದ ತೂಮಿನಾಡು ಜನತೆ

ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡನೇ ವಾರ್ಡು ತೂಮಿನಾಡಿನಲ್ಲಿ ಗುತ್ತಿಗೆದಾರನ ಕಳಪೆ ಕಾಮಗಾರಿಯಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯಿಂದಾಗಿ ಮಣ್ಣುಗಳನ್ನು ರಸ್ತೆ ಮೇಲೆಯೇ ಹಾಕಿ ನಾಗರಿಕರು ವಾಯು ಮಾಲಿನ್ಯದಿಂದ ತತ್ತರಿಸುವಂತಾಗಿದೆ.

ಅಂಗಡಿ ಮಗ್ಗಟ್ಟುಗಳು ಧೂಳಿನಿಂದ ತುಂಬಿ ಹೋಗಿದೆ. ಕಾಲ್ನಡಿಗೆ ಯಾತ್ರಿಕರು ಮೂಗಿಗೆ ಬಟ್ಟೆಯನ್ನು ಕಟ್ಟಿ ಚಲಿಸುವಂತಹ ಪರಿಸ್ಥಿತಿ ಬಂದೊದಗಿದೆ. ಇಷ್ಟೆಲ್ಲವಾದರೂ ಗುತ್ತಿಗೆದಾರ ರಸ್ತೆ ಮೇಲೆ ಸ್ವಲ್ಪವಾದರೂ ನೀರನ್ನು ಸುರಿಸಲು ತಯಾರಾಗುವುದಿಲ್ಲವೆಂಬುದಾಗಿ ನಾಗರಿಕರು ದೂರುತಿದ್ದಾರೆ. ರಸ್ತೆಯಲ್ಲಿ ವಾಹನಗಳು ಸಾಗುತ್ತಿರುವಾಗ ಧೂಳಿನಿಂದಾಗಿ ರಸ್ತೆ ಬದಿಯಲ್ಲಿರುವ ಅಂಗಡಿ ವ್ಯಾಪಾರಿಗಳು, ಮನೆಯವರು ಅನಾರೋಗ್ಯ ಪೀಡಿತರಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply