Breaking News

ಕಳಪೆ ಕಾಮಗಾರಿಯಿಂದ ಸಂಭವಿಸಿದ ಅವಘಡ, ಸುಳ್ಯ ಎ.ಪಿ.ಎಂ.ಸಿ. ಕಟ್ಟಡಕ್ಕೆ ಕ್ಯಾಂಪ್ಕೋ ಲಾರಿ ತಾಗಿ ಬಿದ್ದ ಗೋಡೆ


ಸುಳ್ಯ ಎ.ಪಿ.ಎಂ.ಸಿ.ಯ ಕಳಪೆ ಕಾಮಗಾರಿಯ ಕಟ್ಟಡಕ್ಕೆ ಕ್ಯಾಂಪ್ಕೋ ಲಾರಿ ತಾಗಿ ಗೋಡೆ ಕುಸಿತಗೊಂಡ ಘಟನೆ ಮಂಗಳವಾರ ಸಂಭವಿಸಿದೆ.
ಸುಳ್ಯ ಎ.ಪಿ.ಎಂ.ಸಿ.ಯ ಸ್ವಾಧೀನದ ಸುಳ್ಯ ತಾಲೂಕಿನ ಕೃಷಿಕರ ಅಡಮಾನ ಕಟ್ಟಡಕ್ಕೆ ಕ್ಯಾಂಪ್ಕೋ ಲಾರಿವೊಂದು ತಾಗಿ ಕಟ್ಟಡದ ಎದುರಿನ ಭಾಗ ಕುಸಿದು, ಗೋಡೆ ಬಿರುಕು ಬಿಟ್ಟಿದೆ. ಈ ಕಟ್ಟಡ ಎಪಿ‌ಎಂಸಿಯ ಅನುದಾನದಲ್ಲಿ ಮಡಿಕೇರಿಯ ಕಟ್ರಾಕ್ಟರ್‌ರೊಬ್ಬರ ಟೆಂಡರ್ ಮೂಲಕ ೧೬ ಲಕ್ಷ ವೆಚ್ಚದಲ್ಲಿ ಗೋಡೌನ್ ಕಾಮಗಾರಿ ನಡೆದಿದ್ದು, ಕಟ್ಟಡ ಕಳಪೆ ಗಾಮಗಾರಿಯಿಂದ ಕೂಡಿದ್ದರಿಂದಲೇ ಕಟ್ಟಡ ಕುಸಿಯಲು ಕಾರಣವಾಗಿದೆ ಎಂದು ಕೃಷಿಕ ಸಾರ್ವಜನಿಕರು ದೂರುತ್ತಿದ್ದಾರೆ.
ಗೋಡೌನ್ ನಿರ್ಮಾಣದ ವೇಳೆ ಡೋರಿನ ಬಳಿ ಆಧಾರವಾಗಿರುವ ಭೀಮ್ ವ್ಯವಸ್ಥೆ ಮಾಡದೇ ಸ್ಲಾಬ್ ನಿರ್ಮಿಸಿ, ನೇರವಾಗಿ ಗೋಡೆ ನಿರ್ಮಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಇನ್ನಾದರೂ ವ್ಯವಸ್ಥಿತವಾದ ಕಟ್ಟಡ ನಿರ್ಮಾಣವಾಗಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸಂಜೆ ವೇಳೆ ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ವ್ಯವಸ್ಥಾಪಕರು ಹಾಗೂ ಎಪಿ‌ಎಂಸಿಯ ಕಾರ್ಯದರ್ಶಿ, ಹಿಂದಿನ ಅವಧಿಯ ಅಧ್ಯಕ್ಷ ಜಾಕೆ ಮಾಧವ ಗೌಡ, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಎರಡು ಕಡೆಯವರು ಮಾತುಕತೆ ನಡೆಸಿದಾಗ ಕ್ಯಾಂಪ್ಕೋದ ವತಿಯಿಂದ ಕಟ್ಟಡವನ್ನು ದುರಸ್ಥಿ ಪಡಿಸುವುದಾಗಿ ಒಪ್ಪಿಗೆ ನೀಡಲಾಯಿತು.

Related posts

Leave a Reply