Header Ads
Header Ads
Breaking News

ಕಳೆದುಕೊಳ್ಳುತ್ತಿರುವ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಭಜನಾ ಸ್ಪರ್ಧೆ : ಡಾ| ಬಿ.ಯಶೋವರ್ಮ

ಉಜಿರೆ: ಭಾರತೀಯ ಜೈನ್ ಮಿಲನ್ ವಲಯ-8ರ ಜಿನ ಭಜನಾ ಸ್ಪರ್ಧೆ (ಸೀಸನ್ 4)ಇದರ ಅಂಗವಾಗಿ ಅಖಿಲ ಕರ್ನಾಟಕ ಜಿನಭಜನಾ ಸ್ಪರ್ಧೆ ಕಾರ್ಯಕ್ರಮದನ್ವಯ “ಮಂಗಳೂರು ವಿಭಾಗದ” ಈ ಸ್ಪರ್ಧೆಯು ಡಿಸೆಂಬರ್ ತಿಂಗಳ 15ನೇ ಭಾನುವಾರದಂದು ಬೆಳ್ತಂಗಡಿಯ “ಶ್ರೀ ಮಂಜುನಾಥ ಸ್ವಾಮಿ ಕಲಾ ಭವನ”ದಲ್ಲಿ ಜರಗಲಿದೆ.

ಈ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯು ಬೆಳ್ತಂಗಡಿ ಜೈನ್ ಮಿಲನ್‍ನ ರಜತ ಮಹೋತ್ಸವ ಸಮಿತಿಯ ಗೌರವ ಅಧ್ಯಕರೂ, ರಾಷ್ಟ್ರೀಯ ಜೈನ್ ಮಿಲನ್‍ನ ಜೊತೆ ಕಾರ್ಯದರ್ಶಿಗಳೂ ಆಗಿರುವ ಡಾ| ಬಿ.ಯಶೋವರ್ಮರ ಅಧ್ಯಕ್ಶತೆಯಲ್ಲಿ ಜರಗಿತು.ಸಂಘಟನೆ, ಕಳೆದು ಹೋಗುತ್ತಿರುವ ಸಂಸ್ಕೃತಿಯ ಪುನರುತ್ಥಾನ ಹಾಗೂ ಮುಂದಿನ ಪೀಳಿಗೆ ಭಜನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ ನೀಡುವಲ್ಲಿ [ಭಾರತೀಯ ಜೈನ್ ಮಿಲನ್ ವಲಯ -8ರ] ಭಜನಾ ಸ್ಪರ್ಧೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ವಲಯದ ಮಹಿಳಾ ವಿಭಾಗದ ಅಧ್ಯಕ್ಷರಾಗಿರುವ ವೀರಾಂಗನಾ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್‍ರವರ ಪರಿಕಲ್ಪನೆಯ ಈ ಜಿನಭಕ್ತಿಗೀತೆಗಳ ಸ್ಪರ್ಧಾ ಕಾರ್ಯಕ್ರಮಗಳು ಭಾರತೀಯ ಜೈನ್ ಮಿಲನ್ ವಲಯ-8ರ ಸಹಯೋಗದಿಂದ ಜರಗುತ್ತದೆ. ಇದರ ಯಶಸ್ವಿಗೆ ವಲಯ, ವಿಭಾಗ ಹಾಗೂ ಸ್ಥಳೀಯ ಶಾಖೆಯ ಸಹಕಾರವನ್ನು ಅಪೇಕ್ಷಿಸಿದರು.


ವಲಯಾಧ್ಯಕ್ಷ ವೀರ್ ಪುಷ್ಪರಾಜ್ ಜೈನ್ ಮಾತನಾಡಿ ಮಂಗಳೂರು ವಿಭಾಗದ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಭಜನಾ ತಂಡಗಳನ್ನು ಸಿದ್ಧಪಡಿಸಿ ಭಾಗವಹಿಸುವಂತೆ ಪ್ರೇರೇಪಣೆ ನೀಡಬೇಕು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು.ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ವೀರ್ ಸುದರ್ಶನ್ ಜೈನ್ ಮಾತನಾಡಿ ಜೈನ್ ಮಿಲನ್ ಕಾರ್ಯಕ್ರಮಗಳಲ್ಲಿ ಭಜನಾ ಸ್ಪರ್ಧೆಯು ಸಂಘಟನೆಯ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದ್ದು ಎಲ್ಲಾ ನಿರ್ದೇಶಕರೂ ಈ ಕಾರ್ಯಕ್ರಮದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೆಂದು ವಿನಂತಿಸಿದರು.ವಲಯದ ಕಾರ್ಯಾಧ್ಯಕ್ಷರಾದ ವೀರ್ ಪ್ರಸನ್ನ ಕುಮಾರ್ ಉಡುಪಿ ಇವರು ಉಪಸ್ಥಿತರಿದ್ದು ಭಜನಾ ಸ್ಪರ್ಧೆಯ ಆಯೋಜನೆಯ ಹಿಂದಿನ ಚಿಂತನೆಗಳ ಬಗ್ಗೆ ತಿಳಿಸಿದರು.
ವಿವಿಧ ನಿರ್ದೇಶಕರು ಹಾಗೂ ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷರಾದ ವೀರ್ ಪಾರ್ಶ್ವನಾಥ ಜೈನ್ ಮತ್ತು ಕಾರ್ಯದರ್ಶಿ ವೀರ್ ಮುನಿರಾಜ್ ಅಜ್ರಿ ತಮ್ಮ ಅಭಿಪ್ರಾಯ ತಿಳಿಸಿದರು. ಆತಿಥೇಯ ಬೆಳ್ತಂಗಡಿ ಜೈನ್ ಮಿಲನ್‍ನ ರಜತ ಸಂಭ್ರಮ ಸಮಿತಿ ಅಧ್ಯಕ್ಷರಾದ ವೀರ್ ಪ್ರವೀಣ್ ಕುಮಾರ್ ಇಂದ್ರರವರು ಮಾತನಾಡಿ ಈ ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರಲ್ಲದೆ ಈ ಸಭೆಯನ್ನು ಸಂಘಟಿಸಿದ್ದರು. ರಜತ ಸಮಿತಿಯ ಕಾರ್ಯದರ್ಶಿ ವೀರ್ ಡಾ| ಎ.ಜಯಕುಮಾರ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಎಲ್ಲರನ್ನೂ ಸ್ವಾಗರಿಸಿದರು. ಯುವ ಮಿಲನ್ ಅಧ್ಯಕ್ಷರಾದ ವೀರ್ ನವೀನ್ ಜೈನ್ ಹಾಗೂ ಮಿಲನ್‍ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಲಯ ನಿರ್ದೇಶಕರಾದ ವೀರ್ ಧನ್ಯಕುಮಾರ್ ರೈ ಉಪ್ಪಿನಂಗಡಿ, ವೀರ್ ಅಂಡಾರು ಮಹಾವೀರ್ ಹೆಗ್ಡೆ, ವೀರ್ ರಾಜವರ್ಮ ಆರಿಗ ಉಡುಪಿ, ವೀರ್ ಜಯರಾಜ ಕಂಬಳಿ ಮೂಡಬಿದಿರೆ, ವೀರ್ ಪ್ರಮೋದ್ ಕುಮಾರ್ ವೇಣೂರು, ವೀರ್ ಧರ್ಮಪಾಲ ಜೈನ್ ಕಳಸ ಹಾಗೂ ಪ್ರೊ |  ದಿನೇಶ್ ಚೌಟ, ವೀರ್ ಯುವರಾಜ ಪೂವಣಿ, ವೀರಾಂಗನಾ ರಾಜಶ್ರೀ ಸುದರ್ಶನ ಹೆಗ್ಡೆಯವರು ಸಲಹೆ ಸೂಚನೆ ನೀಡಿದರು. ನವಂಬರ್ ತಿಂಗಳ 15ರ ಒಳಗೆ ಭಾಗವಹಿಸುವ ಭಜನಾ ತಂಡಗಳು ನಿಗದಿತ ಅರ್ಜಿಯಲ್ಲಿ ಸಮೀಪದ ನಿರ್ದೇಶಕರಲ್ಲಿ ತಮ್ಮ ತಂಡದ ಹೆಸರು ನೋಂದಾಯಿಸಿಕೊಳ್ಳುವಂತೆ ನಿರ್ದೇಶಕ ವೀರ್ ಬಿ.ಸೋಮಶೇಖರ್ ಶೆಟ್ಟಿಯವರು ತಿಳಿಸಿ, ವಂದಿಸಿದರು.

Related posts

Leave a Reply

Your email address will not be published. Required fields are marked *