Header Ads
Header Ads
Breaking News

ಕಳೆದ ರಾತ್ರಿ ಸುರಿದ ಮಳೆ ಅವಾಂತರ ಕೊಳ್ನಾಡಿನ ಸೆರ್ಕಳ ಕೋಟಂಕೋಟೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ ವಿದ್ಯುತ್ ಸಂಪರ್ಕ ಕಡಿತ, ವಿದ್ಯುತ್ ಉಪಕರಣಗಳು ಸಂಪೂರ್ಣ ಹಾನಿ

ಕಳೆದ ರಾತ್ರಿ ಸುರಿದ ಮಳೆಯ ಸಂದರ್ಭ ಕೊಳ್ನಾಡು ಗ್ರಾಮದ ಸೆರ್ಕಳ ಕೋಟಂಕೋಟಿ ಎಂಬಲ್ಲಿ ಹಾಜಿ ಬ್ಯಾರಿಯ ಪುತ್ರ ಇಸ್ಮಾಯಿಲ್ ಅವರ ಮನೆಗೆ ಭಾರೀ ಸಿಡಿಲು ಬಡಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ವಿದ್ಯುತ್ ಸಂಪರ್ಕ, ಟಿವಿ ಸೇರಿದಂತೆ ಇನ್ನಿತರ ವಿದ್ಯುತ್ ಉಪಕರಣಗಳು ಸಂಪೂರ್ಣ ನಾಶವಾಗಿವೆ. ಮನೆಯ ಗೋಡೆ ಛಿದ್ರಗೊಂಡಿದ್ದು ಇಸ್ಮಾಯಿಲ್ ಮತ್ತು ಪತ್ನಿ ಜುಬೈದಾ ಗಾಯಗೊಂಡಿದ್ದಾರೆ. ಸಿಡಿಲು ಬಡಿದ ಅಬ್ಬರಕ್ಕೆ ಮನೆ ವಠಾದಲ್ಲಿನ ಬಾಳೆ ಗಿಡಗಳು ಛಿದ್ರವಾಗಿರುವುದು ಭೀಕರತೆಗೆ ಸಾಕ್ಷಿಯಾಗಿದೆ. ಘಟನೆಯಿಂದಾಗೆ ಸುಮಾರು ಮೂವತ್ತು ಸಾವಿರ ನಷ್ಟ ಅಂದಾಜಿಸಲಾಗಿದೆ. ಇದೇ ಸಂದರ್ಭ ಅಲ್ಲೇ ಪಕ್ಕದ ಅಚ್ಚೋಟು ಎಂಬಲ್ಲಿನ ಪುತ್ತಬ್ಬ ಬ್ಯಾರಿಯ ಪುತ್ರ ಅಬೂಬಕ್ಕರ್ ಅವರ ಮನೆಗೂ ಸಿಡಿಲು ಬಡಿದಿದೆ. ವಿದ್ಯುತ್ ಸಂಪರ್ಕ ನಾಶವಾಗಿದೆ. ಘಟನಾ ಸ್ಥಳಕ್ಕೆ ತಾಲೂಕು ಪಂ.ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಪಂಚಾಯತು ಸದಸ್ಯ ಹಮೀದ್ ನಾರ್ಶ ಮತ್ತು ಕಂದಾಯ ಅಧಿಕಾರಿಗಳು ಆಗಮಿಸಿದ್ದು ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.