Header Ads
Header Ads
Header Ads
Breaking News

ಕಳ್ಳತನ ನಡೆಸಿ 2 ಗಂಟೆಯೊಳಗೆ ಪೊಲೀಸರ ಅತಿಥಿ ಕುಂಭಾಶಿ ನಿವಾಸಿ ಹರೀಶ್ ಆಚಾರ್ಯ ಬಂಧಿತ ಆರೋಪಿ ಕುಂದಾಪುರ ಪೇಟೆಯಲ್ಲಿ ನಡೆದ ಘಟನೆ

 

ಕುಂದಾಪುರ : ಮನೆಯಲ್ಲಿ ಯಾರು ಇಲ್ಲದಿರುವುದನ್ನು ಕಂಡು ಕಳ್ಳನೊಬ್ಬ ಮನೆಗೆ ನುಗ್ಗಿ ಕಳವು ನಡೆಸಿ ೨ ಗಂಟೆಯಾಳಗೆ ಪೊಲೀಸರ ಅತಿಥಿಯಾದ ಘಟನೆ ಶನಿವಾರ ನಡೆದಿದೆಕುಂಭಾಶಿ ನಿವಾಸಿ ಹರೀಶ್ ಆಚಾರ್ಯ (46) ಬಂಧಿತ ಆರೋಪಿಯಾಗಿದ್ದು. ಪಿಕ್ಪಿಬ್ಲ್ಯೂಡಿ ವಸತಿ ಗೃಹ ದ ನಿವಾಸಿಯಾಗಿದ್ದ ರವಿ ಎಂಬಾತನ ಮನೆಯಲ್ಲಿ ಹಾಡುಹಗಲೇ ಬೀಗ ಮುರಿದು ಮನೆಗೆ ನುಗ್ಗಿ ಚಿನ್ನಾಭರಣ ಕಳವು ನಡೆಸಿ ಹಿಂದಿನಬಾಗಿಲಿನಿಂದ ಪರಾರಿಯಾಗಿದ್ದ. ಈ ಸಂದರ್ಭ ಆಸ್ಪತ್ರೆಗೆ ತೆರಳಿದ್ದ ರವಿ ಪತ್ನಿ ಮನೆಗೆ ವಾಪಾಸು ಬಂದಾಗ ಮನೆ ಬಾಗಿಲು ತೆರೆದಿತ್ತು. ಮಕ್ಕಳು ಬಾಗಿಲು ತೆರೆದಿರಬೇಕೆಂದು ಮಕ್ಕಳಲ್ಲಿ ಈ ಕುರಿತು ವಿಚಾರಿಸಿದಾಗ ತಾವು ಮನೆಯ ಕೀಲಿಯನ್ನು ಪಡೆದಿಲ್ಲ ಎಂದು ಉತ್ತರಿಸಿದ್ದು.

ಇದರಿಂದ ಆತಂಕಿತರಾಗಿ ಮನೆಯನ್ನ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ ಪ್ರೇಮಾ, ನೀಡಿದ ಮಾಹಿತಿಯಂತೆ ಪೊಲೀಸರು ಕಾರ್ಯಚರಣೆ ನಡೆಸಿ ಕುಂದಾಪುರ ಪೇಟೆಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ. ಮದ್ಯಾಹ್ನ 12;30ರ ಸುಮಾರಿಗೆ ಘಟನೆ ನಡೆದಿರಬೇಕೆಂದು ಶಂಕಿಸಲಾಗಿದ್ದು. ಎರಡು ಗಂಟೆಯೊಳಗೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.ಆರೋಪಿಯಿಂದ ಪ್ರಸ್ತುತ ಕದ್ದಿರುವ ಆಭರಣಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದು ಇನ್ನೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಮಂಜಪ್ಪ ಕ್ರೈಂ ಪಿಎಸ್‌ಐ ದೇವರಾಜ್, ಪಿಎಸ್‌ಐ ಹರೀಶ್ ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು.
ಕುಂದಾಪುರ ಠಾಣೆಯಲ್ಲಿ ಆರೋಪಿಯ ವಿಚಾರಣೆ ನಡೆಯುತ್ತಿದೆ.
ವರದಿ: ತುಂಗಾ,ಕುಂದಾಪುರ

Related posts

Leave a Reply