Header Ads
Header Ads
Breaking News

ಕಳ್ಳಿಗೆ ಗ್ರಾ.ಪಂ. ಅಭಿವೃದ್ಧಿಯ ಹಾದಿಯಲ್ಲಿದೆ ಅಭಿವೃದ್ಧಿಯಲ್ಲಿ ಚೇತರಿಕೆ ಕಂಡಿದೆ ಸಚಿವ ರಮಾನಾಥ ರೈ ಹೇಳಿಕೆ

ಬಂಟ್ವಾಳ: ಕಳ್ಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ದಿಯ ಹಾದಿಯಲ್ಲಿದೆ, ಹೊಸ ಗ್ರಾ.ಪಂ. ಆದ ಬಳಿಕ ಅಭಿವೃದ್ದಿಯಲ್ಲಿ ಚೇತರಿಕೆ ಕಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ಗುರುವಾರ ಕಳ್ಳಿಗೆ ಗ್ರಾಮ ಪಂಚಾಯಿತಿಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಹೊಸ ಗ್ರಾ.ಪಂ.ಗಳನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದೆ ಎಂದು ತಿಳಿಸಿದ ಅವರು ಕನಪಾಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಪರ್ಕ ರಸ್ತೆ, ನೆತ್ತರಕರೆ ರಸ್ತೆ ನಿರ್ಮಾಣಗೊಳ್ಳುತ್ತಿದೆ, ತುಂಬೆಯಿಂದ ನೂತನ ಡ್ಯಾಂನಿಂದ ಶುದ್ದೀಕರಣಗೊಂಡ ನೀರನ್ನು ಸರಬರಾಜು ಮಾಡುವ ಕಾರ್ಯ ಆಗಲಿದೆ. ಬಳಿಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಕುಡಿಯುವ ನೀರು ಕಳ್ಳಿಗೆ ಗ್ರಾಮಕ್ಕೆ ಪೂರೈಕೆಯಾಗಲಿದೆ ಎಂದರು.
ಇದೇ ಸಂದರ್ಭ ನೂತನ ಗರಡಿ ಮನೆಯನ್ನು ಉದ್ಘಾಟಿಸಿ ಸ್ವಚ್ಛತಾ ಕಾಲಿಂಗ್ ಬೆಲ್‌ಗೆ ಸಚಿವ ರಮಾನಾಥ ರೈ ಚಾಲನೆ ನೀಡಿದರು. ವಿಕಲ ಚೇತನರಿಗೆ ಸಹಾಯಧನ, 94ಸಿ ಹಕ್ಕು ಪತ್ರ, ಇಂದಿರಾ ಆವಾಸ್ ಹಾಗೂ ಬಸವ ವಸತಿ ಯೋಜನೆಯ ಹಕ್ಕು ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ರತ್ನಾ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರಾ, ತಾ.ಪಂ.ಸದಸ್ಯ ಶಿವಪ್ರಸಾದ್ ಕನಪಾಡಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಸದಸ್ಯ ದಿವಾಕರ ಪಂಬಂದಬೆಟ್ಟು, ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಎಂ.ಆರ್. ರವಿ, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಎಂಜಿನಿಯರ್ ಕೃಷ್ಣ, ತಹಶೀಲ್ದಾರ್ ಪುರಂದರ ಹೆಗ್ಡೆ, ಪಂಚಾಯಿತಿ ಉಪಾಧ್ಯಕ್ಷ ಪುರುಷ ಸಾಲ್ಯಾನ್ ನೆತ್ತರಕೆರೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಿವಿಲಾಲ್ ಚವ್ಹಾಣ್ ವೇದಿಕೆಯಲ್ಲಿದ್ದರು.