Header Ads
Header Ads
Breaking News

ಕಸಬಾ ಬೆಂಗರೆಯ ಶಾಲಾ ಶಿಕ್ಷಕರ ವರ್ಗಾವಣೆ ವಿಚಾರ : ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಆಕ್ರೋಶ

ಶಿಕ್ಷಕರ ಕಡ್ಡಾಯ ವರ್ಗಾವಣೆಯನ್ನು ಖಂಡಿಸಿ ಕಸಬಾ ಬೆಂಗರೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದ ಘಟನೆ ನಡೆದಿದೆ. ಕಸಬಾ ಬೆಂಗರೆಯ ಶಾಲೆಯಲ್ಲಿ 11 ಶಿಕ್ಷಕರಿದ್ದರು. ಆ ಪೈಕಿ ಒಬ್ಬ ಶಿಕ್ಷಕಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಉಳಿದಂತೆ ಐವರು ಖಾಯಂ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆಗೊಳಿಸಲಾಗಿದೆ. ಆ ಹುದ್ದೆಗೆ ಬೇರೆ ಯಾರ ನೇಮಕಾತಿಯೂ ನಡೆದಿಲ್ಲ. ದಸರಾ ರಜೆ ಮುಗಿದು ಬುಧವಾರ ತರಗತಿ ಆರಂಭಗೊಳ್ಳುತ್ತಲೇ ಶಿಕ್ಷಕರು ಇಲ್ಲದ್ದನ್ನು ಕಂಡ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳ ಈ ಹೋರಾಟಕ್ಕೆ ಶಾಲಾಭಿವೃದ್ಧಿ ಸಮಿತಿಯಲ್ಲದೆ, ಡಿವೈಎಫ್‍ಐ ಸ್ಥಳೀಯ ಘಟಕ ಕೂಡ ಬೆಂಬಲ ನೀಡಿವೆ.

Related posts

Leave a Reply

Your email address will not be published. Required fields are marked *