Header Ads
Breaking News

ಕಸಬ-ಬೆಂಗ್ರೆ ಬೀಚ್‌ನಲ್ಲಿ ಸ್ವಚ್ಚತಾ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಸಬ ಬೆಂಗ್ರೆ ಬೀಚ್‌ನಲ್ಲಿ ಬೀಚ್ ಕ್ಲೀನಿಂಗ್ ಕಾರ್ಯಕ್ರಮ ನಡೆಯಿತು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಿಸರ ಸಚಿವಾಲಯ ಮತ್ತು ಅರಣ್ಯ ಇಲಾಖೆ ಹಾಗೂ ಫಿಶರಿಸ್ ಕಾಲೇಜು ಮಂಗಳೂರು ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ವಿಶ್ವ ಪರಿಸರ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳಿಂದ ಬೀಚ್ ಸ್ವಚ್ಚತಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಮತ್ತು ಬೀಚ್ ಸೇವ್ ಎಂಬ ಘೋಷ ವಾಕ್ಯದೊಂದಿಗೆ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದಾರೆ.ಇಂದು ಕಸಬ ಬೆಂಗ್ರೆ ಬೀಚ್‌ನಲ್ಲಿ ಬೀಚ್ ಕ್ಲೀನಿಂಗ್ ಕಾರ್ಯಕ್ರಮ ನಡೆಯಿತು.

   

ಮೀನುಗಾರಿಕಾ ಉಪ ನಿರ್ದೇಶಕರಾದ ಮಹೇಶ್ ಕುಮಾರು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿಶ್ವ ಪರಿಸರ ದಿನದ ಪ್ರಸಕ್ತ ಜೂನ್ 1 ರಿಂದ 11ರ ವರೆಗೆ ಮಂಗಳೂರಿನ ೧೧ ಕಡೆಗಳಲ್ಲಿ ಬೀಚ್ ಸ್ವಚ್ಚತೆಗಳನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಿ, ಬೀಚ್ ಕ್ಲೀನಿಂಗ್‌ನಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಡಲಕಿನಾರೆಯನ್ನುಸ್ವಚ್ಚಗೊಳಿಸಬೇಕು ಎಂದು ಹೇಳಿದರು.

ಬೀಚ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಂತ ಅಲೋಷಿಯಸ್ ಹೈಸ್ಕೂಲ್, ರೊಸರಾರಿಯೋ ಹೈಸ್ಕೂಲ್ ಮತ್ತು ಕಸಬ ಬೆಂಗ್ರೆ ಹೈಸ್ಕೂಲಿನ ಸುಮಾರು 150ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಸ್ವಚ್ಚತಾ ಕಾರ್ಯಕ್ಕೆ ಸಾಥ್ ನೀಡಿದರು.ಈ ಸಂದರ್ಭ ಕಾರ್ಯಕ್ರಮದಲ್ಲಿ ಮೀನುಗಾರಿಕಾ ಕಾಲೇಜಿನ ಸಂಯೋಜಕ ಡಾ. ಎಸ್ ಆರ್. ಸೋಮಶೇಖರ್, ಪರಿಸರ ಇಲಾಖೆಯ ಅಧಿಕಾರಿ ರಾಜ್‌ಶೇಖರ್ ಪುರಾಣಿಕ್, ಸ್ಥಳೀಯ ಕಾರ್ಪೋರೇಟರ್ ಮೀರಾ ಕರ್ಕೇರ, ಪುಟ್ಟಪ್ಪ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply