Header Ads
Header Ads
Breaking News

ಕಾಂಕ್ರೀಟ್ ರಸ್ತೆಯಲ್ಲಿ ಕೃತಕ ಉದ್ಭವ ತೀರ್ಥ:ಬಿ.ಸಿ.ರೋಡಿನಲ್ಲಿ ರಸ್ತೆಯಲ್ಲೇ ನೀರು ವ್ಯರ್ಥ

 ಬಿ.ಸಿ.ರೋಡಿನ ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ವಿವೇಕ ನಗರಕ್ಕೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯಲ್ಲಿ ಕೃತಕ ಉದ್ಭವ ತೀರ್ಥವೊಂದು ಕಾಣಿಸಿಕೊಂಡಿದೆ!. ಕಾಂಕ್ರೀಟ್ ರಸ್ತೆಯ ಮಧ್ಯೆಯೇ ನೀರು ಜಿನುಗುತ್ತಿದ್ದು ಶುದ್ದ ನೀರು ವ್ಯರ್ಥವಾಗಿ ಚರಂಡಿ ಸೇರುತ್ತಿದೆ.ಕಾಂಕ್ರೀಟ್ ರಸ್ತೆಯ ಅಡಿಭಾಗದಲ್ಲಿರುವ ಪುರಸಭೆಯ ಕುಡಿಯುವ ನೀರಿನ ಪೈಪ್‌ಲೈನ್ ಹೊಡೆದಿರುವುದೇ ಕೃತಕ ಉದ್ಭವ ತೀರ್ಥ ಉಂಟಾಗಲು ಕಾರಣ.

ಕಳೆದ ನಾಲ್ಕೈದು ದಿನಗಳಿಂದ ಈ ದೃಶ್ಯ ಕಂಡು ಬರುತ್ತಿದ್ದು ಯಥೇಚ್ಛವಾಗಿ ಕುಡಿಯುವ ನೀರು ಪೋಲಾಗುತ್ತಿದೆ. ಆದರೂ ಸಂಬಂಧ ಪಟ್ಟ ಇಲಾಖೆ ದುರಸ್ತಿ ಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ನೀರು ಜಿನುಗುತ್ತಿರುವ ಸ್ಥಳದಲ್ಲಿ ಅವೈಜ್ಞಾನಿಕವಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು ಇದರ ಅಡಿ ಭಾಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾದು ಹೋಗಿದೆ. ಇದೀಗ ಪೈಪ್‌ಪೈನ್ ದುರಸ್ತಿ ಪಡಿಸಬೇಕಾದರೆ ಕಾಂಕ್ರೀಟ್ ರಸ್ತೆಯನ್ನೇ ಅಗೆಯ ಬೇಕಾಗುತ್ತದೆ. ಪೂರ್ವ ಯೋಜನೆಯಿಲ್ಲದೆ ಮಾಡಿದ ಕಾಮಗಾರಿಯಿಂದಾಗಿ ಜನರು ತೊಂದರೆ ಪಡುವಂತಾಗಿದೆ.

Related posts

Leave a Reply