Header Ads
Header Ads
Breaking News

ಕಾಂಗ್ರೆಸ್‌ನಿಂದ ದೇಶಾದ್ಯಂತ ಲೋಕಸಂಪರ್ಕ್ ಅಭಿಯಾನ: ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್

ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್‌ನಲ್ಲಿ ಹಣದ ಕೊರತೆ ಇದೆ. ಅದಕ್ಕೆ ಜನರ ಬಳಿಗೆ ಹೋಗುತ್ತಿದ್ದೇವೆ ಆದ್ರೆ ಬಿಜೆಪಿ ಬಳಿ ಅದಾನಿ ಇದ್ದಾರೆ ಅಂತ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣುನಾಥ್ ವ್ಯಂಗ್ಯವಾಡಿದ್ದಾರೆ. ಉಡುಪಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಅವರು ಬಳಿಕ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ನಾವು ಲೋಕಸಭಾ ಚುನಾವಣೆಗೆ ಹೋಗುತ್ತಿದ್ದೇವೆದೇಶಾದ್ಯಂತ ಲೋಕಸಂಪರ್ಕ್ ಅಭಿಯಾನ್ ಶುರುಮಾಡಿದ್ದೇವೆ. ಚುನಾವಣೆ ಎದುರಿಸಲು ಕಾಂಗ್ರೆಸ್‌ಗೆ ಫಂಡ್‌ನ ಕೊರತೆ ಇದೆ. ದೇಶಾದ್ಯಂತ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತೇವೆ. ಬಿಜೆಪಿಗೆ ಫಂಡಿಂಗ್ ಮಾಡಲು ಅದಾನಿ ಇದ್ದಾರೆ.ರೆಫೆಲ್ ಹಗರಣದ ಕೋಟ್ಯಾಂತರ ಹಣ ಬಿಜೆಪಿಯವರಲ್ಲಿದೆ.ನಾವು ಸಾರ್ವಜನಿಕರಿಂದ ಹಣ ಸಂಗ್ರಹಿಸಬೇಕಾಗಿದೆ.ಪಾರದರ್ಶಕವಾಗಿ ಸಾರ್ವಜನಿಕರಿಗೆ ರಸೀದಿ ಕೊಡುತ್ತೇವೆ. ಅಭಿಯಾನ ಅಕ್ಟೋಬರ್ 2 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ರಫೆಲ್ ವಿರುದ್ಧದ ಹೋರಾಟವನ್ನು ಯಶಸ್ವಿಯಾಗಿ ಮಾಡಿದ್ದೇವೆ.ಭಾರತ್ ಬಂದ್ ಕೂಡಾ ಯಶಸ್ವಿಯಾಗಿ ಆಗಿದೆ ಅಂತ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್ ಹೇಳಿಕೆ ನೀಡಿದರು.

Related posts

Leave a Reply