Header Ads
Breaking News

ಕಾಂಗ್ರೆಸ್‌ನ ಗೊಂದಲಗಳೇ ಈ ಬಾರಿ ಬಿಜೆಪಿಗೆ ವರದಾನ : ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಾಸಕರ ಹೇಳಿಕೆ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಗೊಂದಲಗಳೇ ಈ ಬಾರಿ ಬಿಜೆಪಿಗೆ ವರದಾನವಾಗಲಿದೆ. ಮತ್ತೆ ಮೂರನೇ ಬಾರಿ ನಳಿನ್ ಕುಮಾರ್ ಕಟೀಲ್ ಆಯ್ಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ಈ ಕುರಿತು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶಾಸಕರ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸುವ ಮೂಲಕ ನಂಬರ್ ಒನ್ ಸಂಸದರಾಗಿದ್ದಾರೆ. ೫ ವರುರ್ಷದಲ್ಲಿ ೧೬ ಕೋಟಿ ರೂಪಾಯಿ ಕೇಂದ್ರ ಅನುದಾವನ್ನು ಜಿಲ್ಲೆಯ ಅಭಿವೃದ್ಧಿಗೆ ತರುವ ಕೆಲಸ ಮಾಡಿದ್ದಾರೆ. ಇನ್ನು ಮತ್ತೊಮ್ಮೆ ಸಂಸದರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ೭ ಶಾಸಕರು ಜೊತೆಯಾಗಿ ಸವಾಲು ಸ್ವೀಕಾರ ಮಾಡುತ್ತೇವೆ. ಇನ್ನು ಕೇಂದ್ರದ ಸಾಧನೆ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರ ವೈಫಲ್ಯ ವಿರುದ್ಧ ಜನತೆ ಬಿಜೆಪಿಯನ್ನ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಹರೀಶ್ ಪೂಂಜ, ಎಸ್. ಅಂಗಾರ, ಭರತ್ ಶೆಟ್ಟಿ, ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ, ರಾಜೇಶ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *