
ರಾಜ್ಯ ಸರ್ಕಾರ ಅಡಳಿತ ಯಂತ್ರವನ್ನು ದುರುಪಯೋಗ ಮಾಡುತ್ತಿದೆ. ಮೀಸಲಾತಿ ಕ್ಷೇತ್ರಗಳನ್ನ ಅನಗತ್ಯ ಬದಲಾವಣೆ ಮಾಡಲಾಗಿದೆ. ವಾರ್ಡ್ಗಳನ್ನ ಅವೈಜ್ಞಾನಿಕವಾಗಿ ಪುನರ್ ವಿಂಗಡಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಬೆದರಿಸುವ, ಅಪಹರಿಸುವ ಕೆಲಸ ನಡೆಯುತ್ತಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದರು.
ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇಷ್ಟರಮಟ್ಟಿಗೆ ಹಸ್ತಕ್ಷೇಪ ನಾವು ನೋಡಿರಲಿಲ್ಲ. ಗೆಲ್ಲೋದಕ್ಕಾಗಿ ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ. ದ.ಕ. ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಪರಿಣಾಮ ಬೀರಲಿದೆ.ಪಶ್ಚಿಮ ಘಟ್ಟ ಪ್ರದೇಶಗಳ ಜನರು ಆತಂಕಿತರಾಗಿದ್ದಾರೆ. ಇದರಿಂದ ಬಿಜೆಪಿ ವಿರುದ್ಧ ಜನ ನಿಲ್ಲಲಿದ್ದಾರೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಶಾಸಕ ಯು.ಟಿ. ಖಾದರ್, ಐವನ್ ಡಿಸೋಜಾ, ಪ್ರಸಾದ್ ಕಾಂಚನ್, ಮತ್ತಿತ್ತರ ಮುಖಂಡರು ಉಪಸ್ಥಿತರಿದ್ದರು.