Header Ads
Header Ads
Header Ads
Breaking News

ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಸುಳ್ಯ: ಮದ್ಯದಂಗಡಿ ವಿಚಾರದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಅವರು ತನಗೆ ಅವಮಾನ ಮಾಡಿದ್ದು, ಅವರನ್ನು ದುಗಲಡ್ಕ ದುಗ್ಗಲಾಯ ದೈವಸ್ಥಾನಕ್ಕೆ ಸತ್ಯ ಪ್ರಮಾಣಕ್ಕೆ ಕರೆಯುವುದಾಗಿ ಸುಳ್ಯ ನ.ಪಂ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ ತಿಳಿಸಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಯಪ್ರಕಾಶ್ ರೈ ಅವರು ನಿನ್ನೆ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ನನಗೆ ಅವಮಾನ ಮಾಡಿದ್ದಾರೆ. ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ದುಗ್ಗಲಡ್ಕ ಮದ್ಯದಂಗಡಿ ತೆರೆಯಲು ನಾನು ಶಾಮೀಲಾಗಿದ್ದೇನೆ ಎಂದು ಆರೋಪಿಸಿದ್ದಾರೆ, ಇದು ಸರಿಯಲ್ಲ. ಇನ್ನೊಬ್ಬರ ಎಂಜಲು ತಿಂದು ಬದುಕುವವರು ನಾವಲ್ಲ. ಸಂಕ್ರಮಣ ದಿವಸದಂದು ದುಗಲಡ್ಕ ದುಗ್ಗಲಾಯ ದೇವಸ್ಥಾನಕ್ಕೆ ನಾವು ಬಂದು ನನಗೆ ಈ ವಿಷಯದಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಪ್ರಮಾಣ ಮಾಡುತ್ತೇವೆ. ಅವರೂ ಅಲ್ಲಿಗೆ ಬಂದು ಪ್ರಮಾಣ ಮಾಡಲಿ ಎಂದು ಅವರು ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹೆಗ್ಡೆಯವರು, ಹೆಂಡದ ಲಾಬಿ ನಡೆಸುವವರು ನಮಗೆ ಬುದ್ಧಿ ಹೇಳುವ ಅಗತ್ಯ ಇಲ್ಲ. ಅವರ ವ್ಯವಹಾರ ಅವರು ಸರಿಮಾಡಿಕೊಳಲಿ. ನಮ್ಮ ಕಾರ್ಯಕರ್ತರ ಶ್ರಮದಿಂದ ಅವರು ಬಿಜೆಪಿಯಲ್ಲಿ ಹಲವು ಸ್ಥಾನಗಳನ್ನು ಅಲಂಕರಿಸಿದರು. ಮತ್ತೂ ಅಧಿಕಾರ ಸಿಗಲಿಲ್ಲ ಎಂದಾಗ ಬೇರೆ ಪಕ್ಷಕ್ಕೆ ಹೋದರು.ಅವರ ಎಲ್ಲ ವ್ಯವಹಾರಗಳನ್ನು ಮುಂದೆ ಬಹಿರಂಗ ಪಡಿಸುವುದಾಗಿ ಹೇಳಿದರು. ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ನಗರ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ನಾರಾಯಣ, ಸದಸ್ಯೆಯರಾದ ಜಾನಕಿ ನಾರಾಯಣ, ಶ್ರೀಮತಿ ಸುನಿತಾ ಮೊಂತೆರೋ ಉಪಸ್ಥಿತರಿದ್ದರು.

Related posts

Leave a Reply