Header Ads
Header Ads
Breaking News

ಕಾಂಗ್ರೆಸ್ ನಾಯಕರು ಜವಾಬ್ದಾರಿಯುತವಾಗಿ ಮಾತನಾಡಲಿ:ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಕೋಟ ಶ್ರೀನಿವಾಸ ಪೂಜಾರಿ ಕಿಡಿ

ಆಪರೇಶನ್ ಕಮಲ ಮಾಡಿದಕ್ಕೆ ಅಮಿತ್ ಶಾ ಗೆ ಹಂದಿ ಜ್ವರ ಬಂದಿದೆ ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಹೇಳಿಕೆಗೆ ಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎದಿರೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಜವಾಬ್ದಾರಿಯುತವಾಗಿ ಮಾತಾಡಲಿ. ಹಂದಿಜ್ವರ – ಮಂಗನಕಾಯಿಲೆ ಬಗ್ಗೆ ನಾನು ಚರ್ಚೆ ಮಾಡಲ್ಲ. ಬಿ.ಕೆ ಹರಿಪ್ರಸಾದ್ ಹಿರಿಯ ರಾಜಕಾರಣಿ. ಅವರ ಮಾತಿನ ಮೇಲೆ ನಿಗಾ ಇರಲಿ. ಬಿಜೆಪಿ 104 ಇದ್ದವರು 106 ಆಗಿದ್ದೇವೆ. ನಿಮ್ಮ ಶಾಸಕರನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ. ಈಗ 106 ಇದ್ದದ್ದು 115 ಆದ್ರೆ ನೀವೇ ಹೊಣೆ ಅಂತ ಹೇಳಿದ್ರು ಇನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವಿಚಾರ ಬಗ್ಗೆ ಮಾತನಾಡಿದ ಅವರು ನಿಮ್ಮ ಶಾಸಕರನ್ನು ಭದ್ರ ಮಾಡಿಕೊಳ್ಳಿ . ಕಾಂಗ್ರೆಸ್ ಶಾಸಕರ ಬಗ್ಗೆ ಅವರಿಗೇ ಅನುಮಾನ ಇದೆ. ಸಭೆಯಲ್ಲಿ ಏನೇನಾಗುತ್ತದೋ ಮುಂದೆ ನೋಡೋಣ. ಆಪರೇಷನ್ ಕಮಲ ಠುಸ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಕುಮಾರಸ್ವಾಮಿ ಹೇಳಿಕೆಗೆ ಅರ್ಥವೇ ಇಲ್ಲ. ನಾವು ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ ಕುಳಿತ ಸಿದ್ದು-ಎಚ್ ಡಿಕೆ ಆಪರೇಷನ್ ಕಮಲ ಭೀತಿ ಎದುರಾಗಿದೆ. ಅವರಿಬ್ಬರ ಮರು ಆಪರೇಷನ್ ಹೇಳಿಕೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಎಂದರು.

Related posts

Leave a Reply