Header Ads
Header Ads
Breaking News

ಕಾಂಗ್ರೆಸ್-ಬಿಜೆಪಿ ಕರ್ನಾಟಕದ ಎಟಿಎಂ ಪ್ರಾದೇಶಿ ಪಕ್ಷಗಳಿಂದ ರಾಷ್ಟ್ರೀಯ ಪಕ್ಷ ಮುಕ್ತಗೊಳಿಸಲು ಪ್ರಯತ್ನ ಬಹುಜನ ಸಮಾಜವಾದಿ ಪಾರ್ಟಿಯ ಉಸ್ತುವಾರಿ ಗೋಪಿನಾಥ್

ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್-ಬಿಜೆಪಿ ಕರ್ನಾಟಕದ ಹಿತ ದೃಷ್ಠಿಯಿಂದ ಅಭಿವೃದ್ಧಿಯ ಕೆಲಸಗಳನ್ನು ಕೈಗೊಳ್ಳದೆ, ತಮ್ಮ ತಮ್ಮ ಪಕ್ಷವನ್ನು ಬೆಳೆಸುವ ಉದ್ದೇಶದಿಂದ ಕರ್ನಾಟಕವನ್ನು “ಎಟಿಎಂ” ಆಗಿ ಮಾಡಿಕೊಂಡಿದೆ. ರೈತರನ್ನು ಮತ್ತು ಕೋಮುವಾದಿಗಳಿಂದ ರಾಜ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳಾಗಿರುವ ಜೆಡಿಎಸ್-ಬಿಎಸ್‌ಪಿ ಪಕ್ಷಗಳು ಜಂಟಿಯಾಗಿ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯವನ್ನು ಮುಕ್ತಗೊಳಿಸಲು ಕಟಿ ಬದ್ಧರಾಗಬೇಕಾಗಿದೆ ಎಂದು ಬಹುಜನ ಸಮಾಜವಾದಿ ಪಾರ್ಟಿಯ ದಕ್ಷಿಣ ಭಾರತದ ಉಸ್ತುವಾರಿ ಗೋಪಿನಾಥ್ ಹೇಳಿದರು.ಮೂಡುಬಿದಿರೆಯ ಜೆಡಿಎಸ್ ಕಛೇರಿಯಲ್ಲಿ ಬುಧವಾರ ಎರಡೂ ಪಕ್ಷಗಳು ಸೇರಿ ಜಂಟಿಯಾಗಿ ನಡೆಸಿದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷೆ ದೇವೇಗೌಡ ಮಾತುಕತೆ ನಡೆಸಿ ಪ್ರಥಮ ಬಾರಿಯಾಗಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಜಂಟಿಯಾಗಿ ಚುನಾವಣೆಯನ್ನು ಎದುರಿಸಲಿದ್ದೇವೆ ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು ಗೆಲ್ಲಿಸಲು ಪರಸ್ಪರ ಒಪಂದ ಮಾಡಿಕೊಂಡಿದ್ದೇವೆ.ಮಾಜಿ ಸಚಿವ, ಜೆಡಿಎಸ್ ಮುಖಂಡ ಕೆ. ಅಮರನಾಥ ಶೆಟ್ಟಿ ಮಾತನಾಡಿ ಬಿಎಸ್‌ಪಿಯ ಜತೆಯಾಗಿ ಕೆಲಸ ಮಾಡುವುದೆಂದು ತೀರ್ಮಾನಿಸಲಾಗಿದ್ದು ಸುಳ್ಯ ಮತ್ತು ಕಾರ್ಕಳದಲ್ಲಿ ಬಹುಜನ ಪಾರ್ಟಿಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದೆಂದು ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ತೀರ್ಮಾನಿಸಿದ್ದಾರೆ. ಕಾಂಗ್ರೆಸ್-ಬಿಜೆಪಿಯಲ್ಲಿರುವ ನೂನ್ಯತೆಗಳನ್ನು ಜನರ ಬಳಿ ಹೇಳಲಿದ್ದೇವೆ. ಎರಡೂ ಪಕ್ಷದವರು ಒಟ್ಟಾಗಿ ಸೇರಿದರೆ ಗೆಲುವು ನಮ್ಮ ಕಡೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪುರಸಭಾ ಸದಸ್ಯ ಹನೀಫ್ ಆಲಂಗಾರು, ಬಿಎಸ್‌ಪಿಯ ನಾರಾಯಣ ಬೋವಿ, ಸಾಣೂರು ಸತೀಶ್ ಸಾಲ್ಯಾನ್ ಉಪಸ್ಥಿತರಿದ್ದರು. ಜೆಡಿಎಸ್-ಬಿಎಸ್‌ಪಿ ಪಾರ್ಟಿಯ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.