Header Ads
Breaking News

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಹರಿಕೃಷ್ಣ ಬಂಟ್ವಾಳ: ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು ಗೊತ್ತೇ?

ಎಪ್ಪತ್ತು ವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಹಗರಣಗಳೇ ಹೆಚ್ಚಳವಾಗಿದೆ ಹೊರತು ಅಭಿವೃದ್ಧಿಯಾಗಿಲ್ಲ. ಕಳೆದ ಐದು ವರ್ಷಗಳಲ್ಲಿ ಮೋದಿಯವರ ಆಡಳಿತದಲ್ಲಿ ಅಭಿವೃದ್ಧಿ, ಶಾಂತಿ, ಸೌಹಾರ್ದತೆ ದೇಶದಲ್ಲಿ ಉಂಟಾಗಿದೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.

ಅವರು ಮಂಗಳೂರಿನಲ್ಲಿ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನರೇಂದ್ರ ಮೋದಿಯವರ ಈ ಕಾಲಗಟ್ಟದಲ್ಲಿ ಪಾಕಿಸ್ತಾನ ವಿರೋಧ ಮಾಡಿದ್ದರೂ ಸಹ ಮುಸ್ಲಿಂ ರಾಷ್ಟ್ರಗಳು ನರೇಂದ್ರ ಮೋದಿಯವರಿಗೆ ಗೌರವ ನೀಡಿ ಭಾರತದ ಜೊತೆ ನಮ್ಮ ಸಂಬಂಧ ಉಳಿಬೇಕು ಎನ್ನುವ ದೃಷ್ಠಿಯಲ್ಲಿ ವಿದೇಶಾಂಗ ಸಚಿವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದಾರೆ ಇದು ಮೋದಿ ಮತ್ತು ಮುಸ್ಲಿಂ ರಾಷ್ಟ್ರಗಳಿಗೆ ಯಾವ ರೀತಿಯ ಸಂಬಂಧವಿದೆ ಎನ್ನುವುದನ್ನು ತೋರಿಸಿಕೊಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹರಿಕೃಷ್ಣ ಬಂಟ್ವಾಳ ಅವರು, ರಾಬರ್ಟ್ ವಾದ್ರ ಅವರು ಇಂಗ್ಲೆಂಡಿನಲ್ಲಿ ಯಾವ ರೀತಿ ಅಕ್ರಮವಾಗಿ ಹಣ ಮಾಡಿದ್ದಾರೆ ಎಂಬುವುದು ದೇಶಕ್ಕೆ ಗೊತ್ತಾಗಿದೆ. ಇದೀಗ ಜಾಮೀನಿಂದ ಹೊರಗಡೆ ಬಂದಿದ್ದಾರೆ. ಕಾಂಗ್ರೆಸ್‌ನವರಲ್ಲಿ ಹಗರಣಗಳೇ ಜಾಸ್ತಿ ಇರುವುದು ಆದರೆ. ಮೋದಿಯವರ ಮೇಲೆ ಒಂದೂ ಹಗರಣ ಕೂಡ ಇಲ್ಲ ಎಂದು ಹೇಳಿದರು.
ಈ ದೇಶದಲ್ಲಿ ಬಿಜೆಪಿ ಬರದೇ ಇದ್ದರೆ ಮೋದಿಯವರು ಪ್ರಧಾನಿ ಆಗದೇ ಹೋದರೆ ಈ ದೇಶದಲ್ಲಿ ಬಿನ್‌ಲ್ಯಾಡನ್ ಸಂಸ್ಕೃತಿ ತಲೆಎತ್ತುವುದಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಇನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಸರಿಸಾಟಿಯಾದಂತಹ ವ್ಯಕ್ತಿ ಅಲ್ಲ ಎಂದ ಅವರು, ಈ ಬಾರಿಗೆ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಸತೀಶ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *