Header Ads
Header Ads
Breaking News

ಕಾಂಗ್ರೆಸ್ ಶಾಸಕರು ಮಿತಿ ಮೀರಿ ವರ್ತಿಸುತ್ತಿದ್ದಾರೆ ಹೀಗೆ ಮುಂದುವರಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ:ಕುಮಾರಸ್ವಾಮಿ ಎಚ್ಚರಿಕೆ

ಕಾಂಗ್ರೆಸ್ ಶಾಸಕರು ಮಿತಿ ಮೀರಿ ವರ್ತಿಸುತ್ತಿದ್ದಾರೆ. ಅವರನ್ನು ನಾಯಕರು ಹದ್ದುಬಸ್ತಿನಲ್ಲಿಡಬೇಕು, ಅವರು ಇದೇ ರೀತಿ ತಮ್ಮ ವರ್ತನೆಯನ್ನು ಮುಂದುವರಿಸಿದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು ನಮ್ಮ ನಾಯಕರು, ಅವರು ಮುಖ್ಯಮಂತ್ರಿಗಳಾಗಬೇಕೆಂದು ನಾವು ಬಯಸುತ್ತೇವೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರಲ್ಲವೇ’ ಎಂದು ಕೇಳಿದಾಗ ಈ ರೀತಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದಕ್ಕೆಲ್ಲಾ ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು, ನಾನು ಉತ್ತರ ನೀಡಲು ಸೂಕ್ತ ವ್ಯಕ್ತಿಯಲ್ಲ, ಅವರು ಹೀಗೆಯೇ ತಮ್ಮ ವರ್ತನೆಯನ್ನು ಮುಂದುವರಿಸಿದರೆ ನಾನು ಸಿಎಂ ಹುದ್ದೆ ತ್ಯಜಿಸಲು ಸಿದ್ದ. ಕಾಂಗ್ರೆಸ್ ಶಾಸಕರು ತಮ್ಮ ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.

ಇನ್ನೊಂದೆಡೆ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯುತ್ತಿದೆ. ಅದರಲ್ಲಿ ಯಾವೆಲ್ಲಾ ಮಾತುಕತೆ ನಡೆಯಲಿವೆ, ಏನು ತೀರ್ಮಾನಗಳು ಹೊರಬರಲಿವೆ ಎಂಬುದು ಕುತೂಹಲವಾಗಿದೆ.

Related posts

Leave a Reply