Header Ads
Header Ads
Breaking News

ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಮಂಗಳೂರು ಚಲೋ ಮಂಗಳೂರು ಕ್ಷೇತ್ರದಿಂದ 10ಸಾವಿರ ಕಾರ್ಯಕರ್ತರು ತೊಕ್ಕೊಟ್ಟಿನಲ್ಲಿ ಸಂತೋಷ್‌ಕುಮಾರ್ ರೈ ಬೋಳಿಯಾರು ಹೇಳಿಕೆ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಒಂದು ಕಡೆಯಿಂದ ಅಭಿವೃದ್ಧಿ ಮಂತ್ರ ಪಠಿಸುತ್ತಿದ್ದುಇನ್ನೊಂದೆಡೆ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ನಿರಂತರ ನಡೆಯುತ್ತಿದ್ದರೂ ಕೈಕಟ್ಟಿ ಕುಳಿತಿದೆ. ಕಾಂಗ್ರೆಸ್ ಸರಕಾರ ಆಡಳಿತ ಎಲ್ಲ ವಿಧದಲ್ಲಿ ವೈಫಲ್ಯ ಕಂಡಿದ್ದು ಆಡಳಿತವನ್ನು ವಿರೋಧಿಸಿ ಮಂಗಳೂರು ಚಲೋ ನಡೆಯಲಿದೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಹೇಳಿದರು.

ತೊಕ್ಕೊಟ್ಟಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ್ 3ರಿಂದ 6ರ ತನಕ ಕೊಡಗಿನ ಕುಶಾಲನಗರದಿಂದ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಪ್ರತಾಪ್‌ಸಿಂಹ ನೇತೃತ್ವದಲ್ಲಿ ಹಾಗೂ ಉತ್ತರ ಕನ್ನಡದ ಅಂಕೋಲದಿಂದ ಕೇಂದ್ರ ಸಚಿವ ಅಂನತ್ ಕುಮಾರ್ ಹೆಗಡೆ ಹಾಗೂ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮಂಗಳೂರು ಚಲೋ ನಾಡಜನರ ರಕ್ಷಣೆಗಾಗಿ ಜನಸುರಕ್ಷಾ ಯಾತ್ರೆ ನಡೆಯಲಿದೆ. ಅದಕ್ಕಾಗಿ ಮಂಗಳೂರು ಕ್ಷೇತ್ರದಿಂದ ಸುಮಾರು 10ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದು ಕಂಕನಾಡಿ ಗರೋಡಿ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದಿಂದ ಹೊರಟು ಜ್ಯೋತಿ ಸರ್ಕಲ್‌ನಲ್ಲಿ ಸಮಾಪನಗೊಂಡು ಅಲ್ಲಿಂದ ಕೇಂದ್ರ ಮೈದಾನದಲ್ಲಿ ನಡೆಯುವ ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ರವಿಚಂದ್ರ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಹಾಗೂ ಮನೋಜ್ ಆಚಾರ್ಯ ಉಪಸ್ಥಿತರಿದ್ದರು.
ವರದಿ: ಆರೀಫ್ ಉಳ್ಳಾಲ

Related posts

Leave a Reply