Header Ads
Header Ads
Breaking News

ಕಾಂಗ್ರೆಸ್ ಸರ್ಕಾರ ದೇಶದ ಅತ್ಯುತ್ತಮ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿದೆ ಎ‌ಐಸಿಸಿ ವೀಕ್ಷಕ ವಿಷ್ಣುನಾದನ್ ಹೇಳಿಕೆ

 

ರಾಜ್ಯದಲ್ಲಿ ಆಡಳಿತಾರೂಡ ಕಾಂಗ್ರೇಸ್ ಸರ್ಕಾರ ದೇಶದ ಅತ್ಯುತ್ತಮ ಸರ್ಕಾರ. ಪ್ರಣಾಳಿಕೆಯಲ್ಲಿ ನೀಡದ ಭರವಸೆಯನ್ನು ಶೇ.೯೫ರಷ್ಟನ್ನು ನಾಲ್ಕುವರ್ಷಗಳಲ್ಲಿ ಈಡೇರಿಸಿದೆ ಎಂದು ಎ‌ಐಸಿಸಿ ವೀಕ್ಷಕ ವಿಷ್ಣುನಾದನ್ ಹೇಳಿದರು. ಅವರು ತ್ರಾಸಿಯಲ್ಲಿ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದ ಅತ್ಯುನ್ನತ ಸರ್ಕಾರವನ್ನ ಮುಂದಿನ ದಿನಗಳಲ್ಲಿ ಬರುವ ಚುನಾವಣೆ ಪುನರ್ ಆಯ್ಕೆಯಾಗುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ವಿಷ್ಣುನಾದನ್, ಪ್ರಧಾನಿ ನರೇಂದ್ರ ದೇಶದ ಅಭಿವೃದ್ದಿಯನ್ನು ಮರೆತು ಸುಳ್ಳು ಹೇಳುತ್ತಾ ವಿದೇಶ ಪ್ರವಾಸದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಾಸು ತರುತ್ತೇನೆ ಎಂದು ಜನರಿಗೆ ಪ್ರಮಾಣ ಮಾಡಿ ಅಧಿಕಾರಗಿಟ್ಟಿಸಿಕೊಂಡ ಮೋದಿ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಕಪ್ಪು ಹಣ ವಾಪಾಸು ತರಲು ಸಾಧ್ಯವಾಗಿಲ್ಲ. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಹಿತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಸಬ್‌ಕಾ ಸಾತ್ ಸಬಕಾ ವಿಕಾಸ ಎಂದು ಹೇಳುತ್ತಾ ಪ್ರತಿಕ್ಷಣ ದೇಶದ ಜನರ ನಿದ್ದೆಕೆಡಿಸುವ ಕೆಲಸವನ್ನ ಬಿಜೆಪಿ ಆರ್‌ಎಸ್‌ಎಸ್ ಮಾಡಿದೆ. ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ವೈಫಲ್ಯ ಕಂಡಿದೆ. ಆದ್ದರಿಂದ ಕಾರ್ಯಕರ್ತರು ಜನರಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸಾಧನೆಯನ್ನ, ನರೇಂದ್ರ ಮೋದಿಯವರ ಕೇಂದ್ರ ಸರಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದವರು ಹೇಳಿದರು.


ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರ ಸೂಚನೆಯಂತೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಕಾರ್ಯ ನಡೆಸಲಾಗುತ್ತಿದೆ. ಪಕ್ಷದ ಬಲವರ್ಧನೆಗೆ ಸಂಘಟನೆಗೆ ಬ್ಲಾಕ್ ಮಟ್ಟದ ಕಾರ್ಯಕರ್ತರು, ಮುಖಂಡರ ಸಲಹೆ ಪಡೆದು ಮುಂದೆ ಎದುರಾಗುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹಾಗೂ ಸಂಘಪರಿವಾರ ಅನುಸರಿಸುತ್ತಿರುವ ನೀತಿ ಸಫಲವಾಗುದಿಲ್ಲ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡುರಾವ್ ಮಾತನಾಡಿ, ರಾಜ್ಯದಲ್ಲಿ ಜನರ ಪ್ರೀತಿ ವಿಶ್ವಾಸಗಳಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ. ಕರಾವಳಿಯಲ್ಲಿ ಕೋಮುಗಲಭೆ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಮೂಲಕ ಶವದ ಮೇಲೆ ರಾಜಕಾರಣವನ್ನ ಬಿಜೆಪಿ ನಡೆಸುತ್ತಿದೆ. ಒಡೆದು ಆಳುವ ನೀತಿಯನ್ನ ಅನುಸರಿಸುತ್ತಾ ಯುವಕರನ್ನ ತಪ್ಪುದಾರಿಗೆಳೆಯುವ ಕೆಲಸ ಬಿಜೆಪಿ ನಡೆಸುತ್ತಿದ್ದೆ. ಅಮಿತಾ ಷಾ ಮತ್ತು ನರೇಂದ್ರ ಮೋದಿಯವರು ಶಾಸಕರ ಕುದುರೆ ವ್ಯಾಪಾರಕ್ಕೆ ಸಿದ್ದತೆ ನಡೆಸಿದ್ದಾರೆ. ಚುನಾವಣೆ ಸಂದರ್ಭ ಕೋಟಿ ಕೋಟಿ ರೂಪಾಯಿ ಹಣವನ್ನ ಹರಿಯಬಿಡುತ್ತಾರೆ. ಈ ವಾತಾವರಣ ರಾಜ್ಯದಲ್ಲಿ ಕೂಡ ಈ ವಾತಾವರಣ ಸೃಷ್ಟಿಯಾಗಬಹುದು. ಪ್ರಜಾತಂತ್ರದ ವಿರುದ್ಧ ಹೋಗುವ ಬಿಜೆಪಿಗೆ ಈ ಚುನಾವಣೆಯಲ್ಲಿ ಮತ್ತೋಮ್ಮೆ ಪಾಠ ಕಲಿಸಬೇಕು ಉಡುಪಿಯಲ್ಲಿ ಐದೂ ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಬೇಕು ಎಂದರು.

ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಪಕ್ಷದ ಮುಖಂಡ ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಆರ್.ಸಭಾಪತಿ, ಕೆಪಿಸಿಸಿ ಕಾರ್ಯದರ್ಶಿಗಳಾದ ವೆರೋನಿಕಾ ಕರ್ನೇಲಿಯೊ, ಎಂ.ಎಸ್.ಮಹಮ್ಮದ್ ಮಾತನಾಡಿದರು. ಇದೇ ಸಂದರ್ಭ ವಿವಿಧ ಘಟಕದ ಅಧ್ಯಕ್ಷರುಗಳಾದ ಚಂದ್ರ ನಾಯ್ಕ್, ನಾಗಪ್ಪ ಕೊಠಾರಿ, ಶೇಖರ ಪೂಜಾರಿ, ಲಲಿತಾ ಶ್ರೀನಿವಾಸ ಗಾಣಿಗ, ಮುತ್ತಯ್ಯ ಪೂಜಾರಿ, ಸುಬ್ರಹ್ಮಣ್ಯ ಪೂಜಾರಿ ಹಾಗೂ ಜಗದೀಶ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡುರಾವ್ ಪದಪ್ರದಾನ ನಡೆಸಿದರು. ಮುಖಂಡರಾದ ಮುರಳೀ ಶೆಟ್ಟಿ ಇಂದ್ರಾಳಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ನವೀನಚಂದ್ರ ಶೆಟ್ಟಿ, ಸತ್ಯನ್ ಪುತ್ತೂರು, ಸರಳಾ ಕಾಂಚನ್, ಗೌರಿ ದೇವಾಡಿಗ, ಅಶೋಕಕುಮಾರ್ ಕೊಡವೂರು, ನರಸಿಂಹಮೂರ್ತಿ ಉಡುಪಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ರಾಜು ಪೂಜಾರಿ ಬೈಂದೂರು, ರಾಜು ದೇವಾಡಿಗ ತ್ರಾಸಿ, ಜಿಪಂ, ತಾಪಂ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ

Related posts

Leave a Reply