Header Ads
Header Ads
Breaking News

ಕಾಂಗ್ರೆಸ್ ಸಾಧನೆಯನ್ನು ತನ್ನ ಸಾಧನೆ ಎನ್ನುವ ಕೇಂದ್ರ ಕೇಂದ್ರ ಸರ್ಕಾರ ಜನರ ದಾರಿ ತಪ್ಪಿಸುತ್ತಿದೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಆರೋಪ

ಕಾಂಗ್ರೆಸ್ ಪಕ್ಷದ ಸಾಧನೆಯನ್ನು ತನ್ನ ಸಾಧನೆಯೆನ್ನುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೇಸ್ ಆರೋಪಿಸಿದೆ.ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಕಾಂಗ್ರೇಸ್ ಸರಕಾರ ನೀಡಿದ ನಿರ್ಮಲ ಗ್ರಾಮ ಯೋಜನೆಯನ್ನು ಸ್ವಚ್ಛ ಭಾರತ್ ಆಗಿ, ಪ್ರತಿ ಕುಟುಂಬದ ಬ್ಯಾಂಕ್ ಯೋಜನೆ ಜನ್ ಧನ್ ಆಗಿ, ರಾಜೀವ್ ಗಾಂಧಿ ಗ್ರಾಮೀಣ ವಿದ್ಯುಧೀಕರಣ ಯೋಜನೆ ದೀನ್ ದಯಾಳ್ ಉಪಾಧ್ಯಾಯವಾಗಿ, ಪಂಚವಾರ್ಷಿಕ ಯೋಜನೆ ನೀತಿ ಆಯೋಗವಾಗಿ ಬದಲಾಯಿಸಿದ್ದು ಬಿಟ್ಟು ನರಂದ್ರ ಮೋದಿ ದೇಶಕ್ಕಾಗಿ ಏನೂ ಮಾಡಿಲ್ಲ ಎಂದು ಅವರು ಆರೋಪಿಸಿದರು. ರಾಜ್ಯದ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ವಿಚಾರದಲ್ಲಿ ಸರಕಾರವನ್ನು ಬಸ್ ಪಾಸ್ ನೀಡುವಂತೆ ಒತ್ತಾಯಿಸುವುದಾಗಿ ಅವರು ಹೇಳಿದರು.

Related posts

Leave a Reply