Header Ads
Breaking News

ಕಾಂಗ್ರೆಸ್ ಹಿಂದೂಗಳನ್ನು ಕಡೆಗಣಿಸಿ ಸೋಲು ಕಂಡಿದೆ. ಹಿಂದೂಗಳನ್ನು ಕಡೆಗಣಿಸದಂತೆ ಜೆಡಿಎಸ್ ನಾಯಕರಿಗೆ ಹೇಳಿದ್ದೇನೆ. ಜೆಡಿಎಸ್ ಶಾಸಕ ಭೋಜೆ ಗೌಡ ಹೇಳಿಕೆ.

 ಶಿಕ್ಷಕರ ಸಮಸ್ಯಗೆ ಸ್ಪಂದಿಸುವ ದೃಷ್ಟಿಯಲ್ಲಿ ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಕೆಲಸ ಮಾಡುತ್ತೇನೆ ಮತ್ತು ಕರಾವಳಿಯಲ್ಲಿ ಪಕ್ಷ ಬಲ ಪಡಿಸುವ ನಿಟ್ಟಿನಲ್ಲಿ ಹಿಂದೂಗಳನ್ನು ಕಡೆಗಣಿಸಬೇಡಿ ಎಂದು ಕಾರ್ಯಕರ್ತರಿಗೆ ಜೆಡಿಎಸ್ ಶಾಸಕ ಭೋಜೆ ಗೌಡ ಕರೆ ನೀಡಿದರು.ಅವರು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಮಾದ್ಯಮಗೊಷ್ಟಿ ನಡೆಸಿ ಮಾತನಾಡಿ ಆರು ಜಿಲ್ಲೆ ಸೇರಿರುವ ಈ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ನಾನು ಮಂಗಳೂರನ್ನು ಕೇಂದ್ರವಾಗಿ ಇರಿಸಿಕೊಂಡು ಮಂಗಳೂರು ಸೇರಿದಂತೆ ಇತರ ಜಿಲ್ಲೆಗಳ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತೇನೆ. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಕೂಡ ನಡೆಸಿದ್ದೇವೆ. ಇದರ ಜೊತೆ ಜೊತೆಗೆ ಕರಾವಳಿ ಭಾಗದಲ್ಲಿ ಪಕ್ಷ ಬಲ ಪಡಿಸುವ ಕಾರ್ಯವನ್ನು ಕೂಡ ಮಾಡುತ್ತೇನೆ ಎಂದು ಹೇಳಿದರು.ಮಾಧ್ಯಮಗೊಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಹಮ್ಮದ್ ಕುಂಙ, ದಕ್ಷಿಣ ಕನ್ನಡ ಜಿಲ್ಲಾ ಯೂತ್ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ಜೆಡಿಎಸ್ ನಾಯಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply