Header Ads
Header Ads
Breaking News

ಕಾಂಚನಾ ಹ್ಯೂಂಡಯ್ ಶೋರೂಂನಲ್ಲಿ ಮಹಿಳಾ ದಿನಾಚರಣೆ

ಮಂಗಳೂರಿನ ಪಡೀಲ್‌ನಲ್ಲಿರುವ ಕಾಂಚನಾ ಹ್ಯೂಂಡಯ್ ಶೋರೂಂನಲ್ಲಿ ’ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ಯನ್ನು ಸಂಭ್ರಮದಿಂದ ಹಾಗೂ ವಿನೂತನ ರೀತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಕಾಂಚನಾ ಹ್ಯೂಂಡಯ್ ನ ಮಹಿಳಾ ಗ್ರಾಹಕರು ದೀಪ ಬೆಳಗಿಸಿ ಬಳಿಕ ಕೇಕ್ ಕತ್ತರಿಸಿ ಉದ್ಘಾಟಿಸಿದರು. ಈ ವೇಳೆ ಕಾಂಚನಾ ಹ್ಯೂಂಡಯ್ ನ ಜನರಲ್ ಮ್ಯಾನೇಜರ್ ವಿವೀನ್ ಸೋನ್ಸ್ ಮಾತನಾಡಿ ನಮ್ಮ ಶೋರೂಂ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಇದರದೊಂದಿಗೆ ಮಹಿಳಾ ದಿನಾಚರಣೆಯಂತಹಾ ಸಮಾಜಿಕ ಕಾರ್ಯಕ್ರಮವನ್ನು ಮಾಡುತ್ತಾ ಬರುತ್ತಿದೆ. ನಮ್ಮ ಸಮಾಜದಲ್ಲಿ ಹೆಣ್ಣಿಗೆ ಗೌರವಯುತ ಸ್ಥಾನಮಾನವಿದೆ.ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವಿಸಬೇಕು ಎಂದರು.

ಬಳಿಕ ಕಾಂಚನಾ ಹ್ಯೂಂಡಯ್ ನ ಮಹಿಳಾ ಗ್ರಾಹಕರಲ್ಲಿ ಓರ್ವರಾದ ವಿದ್ಯಾ ಭಟ್ಟ್ ಮಾತನಾಡಿ ನಮ್ಮ ಹಿಂದೂ ಸಂಸ್ಕ್ರತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನವಿದೆ ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ .ಮಹಿಳಾ ಸಾಧಕರಾದ ಇಂದಿರಾ ಗಾಂಧಿ, ಮದರ್ ತೆರೇಸಾ, ಕಿರಣ್ ಬೇಡಿ, ಪಿ.ವಿ.ಸಿಂದು,ಪಿ.ಟಿ.ಉಷಾ ಮೊದಲಾದವರು ನಮಗೆ ಸ್ಫೂರ್ತಿ ಎಂದು ಹೇಳಿದರು.

ಈ ಸಂದರ್ಭ ಕಾಂಚನಾ ಹ್ಯೂಂಡಯ್ ನ ಸರ್ವೀಸ್ ಮ್ಯಾನೆಜರ್ ಗಣೇಶ್, ಸೇಲ್ಸ್ ಮ್ಯಾನೇಜರ್ ಗಣಪತಿ, ಅಕೌಂಟ್ ಮ್ಯಾನೇಜರ್ ಸುದರ್ಶನ್,ಕಸ್ಟಮರ್ ಕೇರ್ ಮ್ಯಾನೇಜರ್ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *