Header Ads
Header Ads
Header Ads
Breaking News

ಕಾಂತಾವರ ಉತ್ಸವ-ನಾಡಿಗೆ ನಮಸ್ಕಾರ 19 ಕೃತಿಗಳ ಬಿಡುಗಡೆ ಮೂಡಬಿದ್ರೆಯ ಕಾಂತಾವರ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮ

ಆಂಕರ್: ಕಾಂತಾವರ ಕನ್ನಡ ಸಂಘದ 41 ರ ಸಂಭ್ರಮ ಹಾಗೂ ಕಾಂತಾವರ ಉತ್ಸವದಂಗವಾಗಿ ಮೂಡಬಿದ್ರೆಯ ಕಾಂತಾವರ ಕನ್ನಡ ಭವನದಲ್ಲಿ ನಾಡಿಗೆ ನಮಸ್ಕಾರ 19 ಕೃತಿಗಳ ಬಿಡುಗಡೆ ಹಾಗೂ ಸನ್ಮಾನ ಸಮಾರಂಭವು ನಡೆಯಿತು. ಈ ವೇಳೆ

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ ವಸುಂದರ ಭೂಪತಿ ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ 19 ಹೊತ್ತಗೆಗಳನ್ನು ಬಿಡುಗಡೆಗೊಳಿಸಿದರು ಬಳಿಕ ಮಾತನಾಡಿದ ಅವ್ರು, ಕನ್ನಡ ಭಾಷೆ ಸಂಸ್ಕೃತಿಗೆ ಕರಾವಳಿ ಅನನ್ಯ ಕೊಡುಗೆ ನೀಡಿದೆ. ಗ್ರಂಥಾಲಯ ಸೆಸ್ ಮೂಲಕ ಸಂಗ್ರಹವಾದ 30 ಕೋಟಿಯಷ್ಟು ಹಣ ಇಲಾಖೆಗೆ ಬರಲಿದೆ.
ಈಗ 500 ಪ್ರತಿಗಳನ್ನು ಖರೀದಿಸಲು ಅವಕಾಶವಿದ್ದು ಕೇರಳ, ತಮಿಳುನಾಡುಗಳಂತೆ ಸಾವಿರ ಪ್ರತಿಗಳನ್ನು ಖರೀದಿಗೂ ಚಿಂತನೆ ನಡೆಸಲಾಗುವುದು ಎಂದು ಅವ್ರು ಹೇಳಿದ್ರು.

ಇದೇ ವೇಳೆ ಉಡುಪಿಯ ಪ್ರಸಾದ್ ನೇತ್ರಾಲಯದ ಡಾ. ಕೃಷ್ಣ ಪ್ರಸಾದ್ ಕೆ. ಅವರಿಗೆ ಕಾಂತಾವರ ಕನ್ನಡ ಸಂಘದ ವಾರ್ಷಿಕ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ
ಕೇಂದ್ರದ ಮಾಜಿ ಸಚಿವ ಡಾ. ಎಂ. ವೀರಪ್ಪ ಮೊಲಿ , ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ , ಸಂಪಾದಕ ಡಾ. ಬಿ. ಜನಾರ್ಧನ ಭಟ್ , ಬಾಬು ಶೆಟ್ಟಿ ನಾರಾವಿ , ವಿಠಲ ಬೇಲಾಡಿ, ಸರೋಜಿನಿ ನಾಗಪ್ಪಯ್ಯ ಮತ್ತಿತರು ಉಪಸ್ಥತಿರಿದ್ರು.

Related posts

Leave a Reply