Header Ads
Breaking News

ಕಾಟಿಪಳ್ಳ-ಗಣೇಶಪುರದ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಆಂಬುಲೆನ್ಸ್ ವಾಹನದ ಲೋಕಾರ್ಪಣಾ ಕಾರ್ಯಕ್ರಮ

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಕಾಟಿಪಳ್ಳ-ಗಣೇಶಪುರದ ಸೇವಾ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ವತಿಯಿಂದ ಕಾಟಿಪಳ್ಳ ಕ್ಷೇತ್ರದ ಸಾರ್ವಜನಿಕರಿಗೆ ಉಚಿತ ಸೇವಾ ಆಂಬುಲೆನ್ಸ್ ವಾಹನದ ಲೋಕಾರ್ಪಣಾ ಕಾರ್ಯಕ್ರಮವು ಕಾಟಿಪಳ್ಳದ ನಿತ್ಯಾನಂದ ಸಭಾ ಭವನದಲ್ಲಿ ಜರುಗಿತು.. ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹರೇಕಳ ಹಾಜಬ್ಬರವರು ಲೋಕಾರ್ಪಣೆಗೊಳಿಸಿ ಶುಭಹಾರೈಸಿದರು. ಕಾಟಿಪಳ್ಳ ಕೃಷ್ಣಾಪುರದ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ವಾಸುದೇವ ರಾವ್ ದೇವಸ್ಯ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ್ರು. ಈ ಸಂದರ್ಭ ಟ್ರಸ್ಟ್‍ನ ಗೌರವ ಕಾನೂನು ಸಲಹೆಗಾರರದಾ ಮಯೂರ ಕೀರ್ತಿ, ಟ್ರಸ್ಟ್‍ನ ಅಧ್ಯಕ್ಷ ಎಪಿ ಮೋಹನ್ ಗಣೇಶಪುರ, ಉದ್ಯಮಿ ಫಿಲಿಫ್ ಮೆಂಡೋನ್ಸಾ ಬೆಳ್ಮಣ್, ಸದಾನಂದ ಕರ್ಕೇರ, ಶ್ರೀ ನಿತಯಾನಂದ ಭಜನಾ ಮಂದಿರದ ಅಧ್ಯಕ್ಷರಾದ ವಿಠಲ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. 

 

Related posts

Leave a Reply

Your email address will not be published. Required fields are marked *