Header Ads
Header Ads
Breaking News

ಕಾಡಿನಿಂದ ನಾಡಿಗೆ ಬಂದ ಅಪರೂಪದ ಕಡವೆ

 ಕಾಡಿನಲ್ಲಿ ಕಾಣಸಿಗುವ ಬಲು ಅಪರೂಪದ ಕಡವೆಯೊಂದು ನಾಡಿಗೆ ಬಂದು ಸಿಲುಕಿ ಹಾಕಿಕೊಂಡ ಘಟನೆ ಬ್ರಹ್ಮಾವರ ತಾಲೂಕು ಬಾರಕೂರು ಕಚ್ಚೂರು ಗುಂಡಿಕೆರೆಯಲ್ಲಿ ನಡೆದಿದೆ.

ಆಕಸ್ಮಿಕವಾಗಿ ಆಹಾರ ಅರಸುತ್ತಾ ಬಂದ ಕಡೆವೆಯೊಂದು ಗುಂಡಿಕೆರೆ ಬಿದ್ದು ಮೇಲೇರಿ ಬರಲಾರದೆ ಜೀವನ್ಮರಣ ಸ್ಥಿತಿಯಲ್ಲಿತ್ತು, ನಾಯಿಗಳು ಕೂಗಾಡುತ್ತಿರುವುದು ಗಮನಿಸಿದ ಸ್ಥಳೀಯರು ಕೆರೆ ಪರಿಶೀಲಿಸಿದಾಗ ಕಡೆವೆ ನೀರಿನಲ್ಲಿ ಬಿದ್ದಿರುವುದು ಕಾಣಿಸಿದೆ. ಸ್ಥಳೀಯರಾದ ಮಧುಸೂಧನ ನೇತೃತ್ವದಲ್ಲಿ ಸುಮಾರು 4 ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಕಡವೆಯನ್ನು ಕೆರೆಯಿಂದ ಮೇಲೆತ್ತಲಾಯಿತು. ಆದರೆ ತುಂಬಾ ಹೊತ್ತಿನಿಂದ ನೀರಿನಲ್ಲಿ ಮುಳುಗೇಳುತ್ತಾ ನೀರು ಕುಡಿದಿದ್ದ ಕಡವೆಯನ್ನು ಪಶುವೈದ್ಯ ಮಹೇಶ್ ಶೆಟ್ಟಿ ತಪಾಸಣೆ ಮಾಡುವಾಗ ಮೃತಪಟ್ಟಿತ್ತು. ಬಳಿಕ ಅರಣ್ಯ ಇಲಾಖೆಯ ಜೀವನ್ ದಾಸ್ ಶೆಟ್ಟಿ, ಸುರೇಶ್ ಸಮ್ಮುಖದಲ್ಲಿ ಕಡವೆಯ ಪೋಸ್ಟ್ ಮಾರ್ಟಂ ಮಾಡಿ ಹೂಳಲಾಯಿತು. ಈ ಘಟನೆ ಸಂದರ್ಭ ಉಪಸ್ಥಿತರಿದ್ದ ಸ್ಥಳೀಯ ಪರಸರ ಪ್ರೇಮಿಗಳು, ಇತ್ತೀಚೆಗೆ ಸಾಕಷ್ಟು ಸಂಖ್ಯೆಯಲ್ಲಿ ಕಾಡು ಪ್ರಾಣಿಗಳು ನಾಡಿಗೆ ಬಂದು ಪ್ರಾಣಾಪಾಯಕ್ಕೆ ಒಳಗಾಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

Related posts

Leave a Reply