Header Ads
Breaking News

ಕಾಡುಕೋಣಗಳ ಕಾಟ, ರೈತರಿಗೆ ಸಂಕಷ್ಟ : ತೋಟಕ್ಕೆ ಲಗ್ಗೆಯಿಟ್ಟ 14ಕ್ಕೂ ಹೆಚ್ಚು ಕಾಡುಕೋಣಗಳ ತಂಡ

ಪುತ್ತೂರು ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ರೈತರ ಭೂಮಿಗೆ ಕಾಡುಕೋಣಗಳ ಸಮಸ್ಯೆ ವಿಪರೀತವಾಗಿದ್ದು, ಸುಮಾರು 14ಕ್ಕೂ ಹೆಚ್ಚಿರುವ ಕಾಡುಕೋಣಗಳ ತಂಡ ಕೃಷಿ ತೋಟಗಳಿಗೆ ಲಗ್ಗೆ ಇಟ್ಟು ಕೃಷಿಹಾನಿ ಉಂಟುಮಾಡುತ್ತಿವೆ. ಇದರಿಂದ ರೈತ ವರ್ಗ ಕಂಗಾಲಾಗಿದೆ.

ಪುತ್ತೂರು ತಾಲೂಕಿನ ಬಡಗನ್ನೂರು ಹಾಗೂ ಅರಿಯಡ್ಕ ಗ್ರಾಮ ವ್ಯಾಪ್ತಿಯ ಬಳ್ಳಿಕಾನ, ಪೆರಿಗೇರಿ, ಕೇಪುಳಕಾನ ಮೋಡಿಕೆ, ಮುಂಡೋಳೆ, ಅಂಬಟೆಮೂಲೆ ಪರಿಸರದಲ್ಲಿ ಕಾಡುಕೋಣಗಳಿರುವ ಹಿಂಡು ಕಳೆದ ಕೆಲವು ತಿಂಗಳುಗಳಿಂದ ಸುತ್ತಾಡಿಕೊಂಡು ಕೃಷಿ ತೋಟಗಳನ್ನು ನಾಶ ಮಾಡುತ್ತಿವೆ. ರೈತರ ಕೃಷಿ ತೋಟದಲ್ಲಿ ಈ ಕಾಡುಕೋಣಗಳು ನಡೆಸುತ್ತಿರುವ ಧಾಂದಲೆಯನ್ನು ರೈತರು ಕೈಕಟ್ಟಿ ಕುಳಿತು ನೋಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಾಡಿಗೆ ಲಗ್ಗೆ ಇಟ್ಟಿರುವ ಕಾಡುಕೋಣಗಳಿಂದ ಸ್ಥಳೀಯ ಜನತೆಗೆ ಅಪಾಯ ಉಂಟಾಗದಿದ್ದರೂ, ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಮಾಡುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ವನ್ಯಜೀವಿ ಕಾಯ್ದೆಯ ಹಿನ್ನಲೆಯಲ್ಲಿ ಅರಣ್ಯ ಇಲಾಖೆಗೆ ಭಯಪಟ್ಟು ಕಾಡುಕೋಣಗಳು ನಡೆಸುತ್ತಿರುವ ಉಪಟಳವನ್ನು ನೋಡುವುದು ಮಾತ್ರ ರೈತರ ಕೆಲಸವಾಗಿದೆ.

ತೋಟದಲ್ಲಿರುವ ಬಾಳೆಗಿಡಗಳು, ಎರಡು-ಮೂರು ವರ್ಷ ಬೆಳೆದು ನಿಂತು ಮೊದಲ ಪಿಂಗಾರ ಬಿಡುವ ಅಡಕೆ ಸಸಿಗಳು, ಚಿಕ್ಕ ತೆಂಗಿನ ಗಿಡಗಳು ಈ ಕಾಡುಕೋಣಗಳ ಹಾವಳಿಗೆ ಸಿಲುಕಿ ನಾಶವಾಗುತ್ತಿವೆ. ಅರಣ್ಯ ಇಲಾಖೆಯ ರೈತರ ತೋಟಗಳಿಗೆ ಸಮಸ್ಯೆ ಉಂಟು ಮಾಡುತ್ತಿರುವ ಕಾಡುಕೋಣಗಳ ಕಾಟ ತಪ್ಪಿಸಲು ಮುಂದಾಗಬೇಕಾಗಿದೆ.

Related posts

Leave a Reply

Your email address will not be published. Required fields are marked *