Header Ads
Header Ads
Breaking News

ಕಾಡುತ್ಪತ್ತಿ ವ್ಯಾಪರಂಗಡಿಯಿಂದ ಭಾರೀ ಮೌಲ್ಯದ ಸಾಮಾಗ್ರಿ ಹಾಗೂ ನಗದು ಕಳವು.

ಮಂಜೇಶ್ವರ: ಇಲ್ಲಿಗೆ ಸಮೀಪದ ಬಾಯಾರು ಪದವಿನಲ್ಲಿ ಕಾರ್ಯಾಚರಿಸುತ್ತಿರುವ ಕಾಡುತ್ಪತ್ತಿ ವ್ಯಾಪಾರ ಸಂಸ್ಥೆಗೆ ರಾತ್ರಿಯಲ್ಲಿ ಶಟರಿನ ಬೀಗ ಮುರಿದ ಒಳನುಗ್ಗಿದ ಕಳ್ಳರು ಭಾರೀ ಮೌಲ್ಯದ ಅಡಿಕೆ, ಕರಿಮೆಣಸು ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.ಬಾಯಾರು ಪದವು ಕ್ಯಾಂಪ್ಕೋ ಸಮೀಪದ ಎಂ ಎ ಆರ್ ಎಚ್ ಕಾಂಪ್ಲೆಕ್ಸ್ ನಲ್ಲಿ ಅಬ್ದುಲ್ ರಹ್ಮನ್ ಹಾಜಿ ಎಂಬವರ ಮಾಲಕತ್ವದಲ್ಲಿರುವ ವ್ಯಾಪಾರ ಸಂಸ್ಥೆಯಲ್ಲಿ ಈ ಕಳವು ನಡೆದಿದೆ.ಅಂಗಡಿಯ ಶಟರು ಮುರಿದು ನುಗ್ಗಿದ ಕಳ್ಳರು 358 ಕಿಲೋ ಹಳೆಯ ಅಡಿಕೆ, 80 ಕಿಲೋ ಹೊಸ ಅಡಿಕೆ,118 ಕಿಲೋ ಕರಿಮೆಣಸು ಹಾಗೂ ಡ್ರಾವರಿನಲ್ಲಿದ್ದ 18000ರೂ. ನಗದನ್ನು ದೋಚಿರುವುದಾಗಿ ದೂರಲಾಗಿದೆ. ಶುಕ್ರವಾರ ಬೆಳಿಗ್ಗೆ ಮಾಲಕರು ಅಂಗಡಿ ತೆರೆಯಲು ಬಂದಾಗ ಕಳವು ನಡೆದಿರುವುದು ಗಮನಕ್ಕೆ ಬಂದಿದೆ.

ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ.

Related posts

Leave a Reply