Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಕಾಣಿಯೂರಿನಲ್ಲಿ ಇಲ್ಲದ ರಸ್ತೆಗೆ ಹಣ ಬಿಡುಗಡೆ ಹಣ ಲೂಟಿ ಹೊಡೆಯುತ್ತಿದೆ ಎಂದು ಆರೋಪ ಸಾಮಾಜಿಕ ಕಾರ್ಯಕರ್ತ ರುಕ್ಮಯ್ಯ ಗೌಡ ಆರೋಪ

ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮಪಂಚಾಯತ್ ಇಲ್ಲದ ರಸ್ತೆಗೆ ಹಣ ಬಿಡುಗಡೆ ಮಾಡಿಸಿ ಹಣ ಲೂಟಿ ಹೊಡೆಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ರುಕ್ಮಯ್ಯ ಗೌಡ ಆರೋಪಿಸಿದ್ದಾರೆ.

ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಕಾಣಿಯೂರು ಗ್ರಾಮದ ಕಾಣಿಯೂರ-ಮಠತ್ತಾರು-ಗುಂಡಿಗದ್ದೆ ಅಭಿವೃದ್ಧಿಗಾಗಿ ಗ್ರಾಮಪಂಚಾಯತ್ 1.47 ಲಕ್ಷ ಹಾಗೂ ಏರಾಜೆ-ಕಾರ್ಯ-ಮಲೆಕರ್ಚಿ ರಸ್ತೆ ಅಭಿವೃದ್ಧಿಗಾಗಿ 75 ಸಾವಿರ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಎಂದು ಬಿಲ್ ಮಾಡಲಾಗಿದೆ. ಆದರೆ ಈ ರಸ್ತೆಗಳಲ್ಲಿ ಕಾಮಗಾರಿಗಳೇ ನಡೆದಿಲ್ಲ. ಎರಡೂ ರಸ್ತೆಯೂ ರೈಲ್ವೆ ಇಲಾಖೆಯ ಅಧೀನಕ್ಕೊಳಪಟ್ಟಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

Related posts

Leave a Reply