Header Ads
Header Ads
Header Ads
Breaking News

ಕಾನೂನು ಉಲ್ಲಂಘನೆ ಆರೋಪ ಐರೋಡಿ ಗ್ರಾ.ಪಂ. ವಿರುದ್ಧ ಎ.ಸಿ.ಬಿ.ಗೆ ದೂರು

 

ಕುಂದಾಪುರ: ಐರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಸ್ತಾನ ಮೀನುಮಾರುಕಟ್ಟೆಯ ಸಮೀಪದ ಪಂಚಾಯತ್ ಆಸ್ತಿಯಾದ ಅಂಗಡಿ ಕೋಣೆಗಳ ಏಲಂ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಐರೋಡಿ ಗ್ರಾ.ಪಂ. ಆಡಳಿತ ಮಂಡಳಿ ವಿರುದ್ಧ ಎಸಿಬಿಗೆ ಸ್ಥಳೀಯರಾದ ಥಾಮಸ್‌ರೋಡ್ರಿಗಸ್ ದೂರು ನೀಡಿದ್ದಾರೆ.

ಪಂಚಾಯತ್ ಆಸ್ತಿಯಾದ ಸಾಸ್ತಾನ ಮೀನು ಮಾರುಕಟ್ಟೆ ಹಾಗೂ ಸಂತೆ ಮಾರುಕಟ್ಟೆ ಅಂಗಡಿ ಕೋಣೆಗಳ ಎಲಂ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘನೆ ಮಾಡಿದೆ ಹಾಗೂ ಕಾನೂನು ಬಾಹಿರವಾಗಿ ಬಾಡಿಗೆದಾರರರನ್ನು ಹೊರಹಾಕಿದೆ ಎಂದು ಉಡುಪಿ ಭ್ರಷ್ಟಾಚರ ನಿಗ್ರಹ ದಳ (ಎ.ಸಿ.ಬಿ.)ಗೆ ದೂರು ನೀಡಿದ್ದಾರೆ.

ಕಟ್ಟಡ ಬಾಡಿಗೆ ನೀಡುವ ಸಂದರ್ಭ ನೀಡಿದ ಎಲಂ ನೋಟೀಸು ಮತ್ತು ಎಲಂ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಹಾಗೂ ಶೇ.೪೦ರಷ್ಟು ಬಾಡಿಗೆ ಮೊತ್ತವನ್ನು ಕಾನೂನು ಬಾಹಿರವಾಗಿ ಇಳಿಕೆ ಮಾಡಲಾಗಿದೆ. ಇದೀಗ ಬಾಡಿಗೆದಾರರನ್ನು ಬಲವಂತವಾಗಿ ಹೊರಹಾಕಲಾಗಿದೆ. ಇದರಲ್ಲಿ ಆಡಳಿತ ದುರುಪಯೋಗವಾಗವಾಗಿದ್ದು, ಪಂಚಾಯತ್ ಅಧ್ಯಕ್ಷರು, ಪಿ.ಡಿ.ಒ. ಲೆಕ್ಕಪರಿವೀಕ್ಷಕರು, ೧೫ ಮಂದಿ ಗ್ರಾ.ಪಂ. ಸದಸ್ಯರು ಭಾಗಿಯಾಗಿದ್ದಾರೆ ಎಂದು ದೂರಲಾಗಿದೆ.

ದೂರಿನ ಹಿನ್ನಲೆಯಲ್ಲಿ ಎ.ಸಿ.ಬಿ. ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲಿಸಿ ತನಿಖೆ ನಡೆಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ

Related posts

Leave a Reply