Header Ads
Header Ads
Breaking News

ಕಾಪು:ಅವಳಿ ಜಿಲ್ಲೆಗಳ ಐಟಿ ಕ್ವಿಜ್ ಸ್ಪರ್ಧೆ

ಕಾಪುವಿನ ವಿದ್ಯಾನಿಕೇತನ ಸಮೂಹ ಸಂಸ್ಥೆ ಆಯೋಜಿಸಿದ ಉಡುಪಿ-ಮಂಗಳೂರು ಅವಳಿ ಜಿಲ್ಲೆಗಳ ಪ್ರೌಢ ಶಾಲಾ ವಿದ್ಯಾರ್ಥಿಗಳ ಐಟಿ ಕ್ವಿಜ್ ಸ್ಪರ್ಧೆಗೆ ಅವಳಿ ಜಿಲ್ಲೆಗಳ 16 ಶಾಲೆಗಳಿಂದ 31 ತಂಡಗಳು ಪಾಲ್ಗೊಂಡು, ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮದ ಬಗ್ಗೆ ಮಾತನಾಡಿದ ಮಾತೃ ಸಂಸ್ಥೆಯ ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥ ವಿದ್ಯಾಧರ್ ಪುರಾಣಿಕ್, ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಐಟಿ ಜ್ಞಾನ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ವಿದ್ಯಾನಿಕೇತನ ಸಮೂಹ ಸಂಸ್ಥೆಯ ಸಂಯೋಜನೆಯಲ್ಲಿ, ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ 16 ಶಾಲೆಗಳಿಂದ 31 ತಂಡಗಳು ಪಾಲ್ಗೊಂಡು ಇದರ ಪ್ರಯೋಜನವನ್ನು ಪಡೆದುಕೊಂಡಿದೆ.

ಈ ಕಾರ್ಯಕ್ರಮ ನಮ್ಮ ಸಂಸ್ಥೆಯಲ್ಲಿ ಎರಡನೇ ಬಾರಿಗೆ ನಡೆಸುತ್ತಿದ್ದು, ಪ್ರತೀ ವರ್ಷವೂ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗಾಗಿ ಈ ಕಾರ್ಯಕ್ರಮ ನಡೆಯಲಿದೆ. ಇಂದಿನ ಈ ಕಾರ್ಯಕ್ರಮವನ್ನು ಮಾತೃಸಂಸ್ಥೆಯ ಆಢಳಿತಾಧಿಕಾರಿ ವಿ.ಕೆ. ಉದ್ಯಾವರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ದಾರೆ ಎಂದರು.

Related posts

Leave a Reply