Header Ads
Breaking News

ಕಾಪುವಿನಲ್ಲೊಂದು ಎಲೆ ಮರೆ ಕಾಯಿಯಂತೆ ಬೆಳೆಯುತ್ತಿರುವ ಪ್ರತಿಭೆ…

ಯಾವುದೋ ಗಳಿಗೆಯಲ್ಲಿ ಅಂಟಿಕೊಂಡ ಚಿತ್ರಕಲೆಯ ಗೀಳು…ಇದೀಗ ಆಕೆಯ ಬದುಕನ್ನೇ ಬದಲಿಸುವ ಮಟ್ಟಿಗೆ ಬೆಳೆದು ನಿಂತಿದ್ದರೂ, ಬಡತನದ ದೆಸೆಯಿಂದಾಗಿ ಎಲೆ ಮರೆಯ ಕಾಯಿಯಂತೆ ಹೊರ ಪ್ರಪಂಚಕ್ಕೆ ಬರಲು ಕಾತರಿಸುತ್ತಿರುವ ಅನನ್ಯ ಪ್ರತಿಭೆಯೇ ಕಾಪು ಕೊಪ್ಪಲಂಗಡಿ ನಿವಾಸಿ ರಕ್ಷಾ ಪೂಜಾರಿ.

ಈಕೆ ಕಾಪು ಕೊಪ್ಪಲಂಗಡಿಯ ಬಾಡಿಗೆ ಮನೆಯಲ್ಲಿ ತಂದೆ ತಾಯಿ ಹಾಗೂ ತಮ್ಮ ನೊಂದಿಗೆ ವಾಸ. ಆರ್ಥಿಕವಾಗಿ ಬಡತನವಿದ್ದರೂ ಈಕೆಯಲ್ಲಿರುವ ಪ್ರತಿಭೆಗೆ ದೇವರು ಬಡತನ ಕರುಣಿಸಿಲ್ಲ ಬದಲಾಗಿ ಚಿತ್ರಕಲೆ ಈಕೆಗೆ ಒಲಿದು ಬಂದಿದ್ದು, ಈಕೆ ಚಿನ್ನ ಕೈಯಿಂದ ಅರಳಿನಿಂತ ಚಿತ್ರವಿಚಿತ್ರ ಬಣ್ಣದ ಪ್ರಪಂಚ ಅರೆ ಕ್ಷಣ ನೋಡುಗರನ್ನು ನಿಬ್ಬೆರಗಾಗಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಸಣ್ಣ ಪುಟ್ಟ ಪ್ರತಿಭೆಗಳಿಗೆ ದೊರಕುವ ಪ್ರಚಾರ- ಸಹಕಾರ ಈ ಅನನ್ಯ ಪ್ರತಿಭೆಗೆ ದೊರಕದಿರುವುದೇ ಒಂದು ದೊಡ್ಡ ಕೊರತೆ. ಯಾವುದೋ ಖಾಸಗಿ ಕಛೇರಿಯಲ್ಲಿ ದುಡಿಯುತ್ತಿದ್ದ ವೇಳೆ ಸಮಯ ಸಿಕ್ಕಾಗ ಖಾಲಿ ಹಾಳೆಯಲ್ಲಿ ಗೀಚಿ ತನ್ನ ಸಹಪಾಠಿಗಳ ಬೆನ್ನು ತಟ್ಟುವಿಕೆಯಿಂದ ಪ್ರೇರಣೆ ಗೊಂಡ ಈಕೆ ತಾನೇಕೆ ಇದನ್ನು ಮುಂದುವರಿಸ ಬಾರದು ಎಂಬ ಚಲದೊಂದಿಗೆ ಮುಂದಡಿ ಇಷ್ಟು ಇದೀಗ ಅದರಲ್ಲೇ ಬೆಳೆಯ ಬೇಕು ಎಂದು ಟೊಂಕ ಕಟ್ಟಿನಿಂದ ಈ ಎಳೆಯ ಪ್ರತಿಭೆಗೆ ಪ್ರೋತ್ಸಾಹ ಸಲಹೆ ಸಹಕಾರಗಳು ಹರಿದು ಬರ ಬೇಕಾಗಿದೆ. ತಾನು ಬೆಳೆಯುವುದರೊಂದಿಗೆ ತನ್ನಲ್ಲಿರುವ ವಿಧ್ಯೆಯನ್ನು ಮತ್ತಷ್ಟು ಉತ್ಸಾಹಿ ತರುಣ ತರುಣಿಯರಿಗೆ ಕಲಿಸಿಕೊಡ ಬೇಕೆಂಬ ಹಂಬಲ ಈಕೆಯದ್ದು, ತನ್ನಲ್ಲಿರುವ ಕಲೆಯನ್ನು ಮತ್ತಷ್ಟು ಶ್ರೀಮಂತ ಗೊಳಿಸುವ ನಿಟ್ಟಿನಲ್ಲಿ ಮೂಡಬಿದರೆ ಆಳ್ವಸ್ ವಿದ್ಯಾಸಂಸ್ಥೆಯಲ್ಲಿ ಬಿಬಿಎ ಪದವಿಯನ್ನು ಎರಡನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದು, ತನ್ನ ಪ್ರತಿಭೆಗೆ ತನ್ನ ತಂದೆ ತಾಯಿ ಹಾಗೂ ಕೆಲವು ಹಿತ್ತೈಸಿಗಳ ಸಲಹೆ ಸಹಕಾರಗಳೇ ಮೂಲ ಪ್ರೇರಣಾ ಶಕ್ತಿ ಎನ್ನುತ್ತಾರೆ ರಕ್ಷಾ ಪೂಜಾರಿ.

Related posts

Leave a Reply

Your email address will not be published. Required fields are marked *