Header Ads
Breaking News

ಕಾಪುವಿನ ಸಮಾನ ಮನಸ್ಕರಿಂದ “ಯಕ್ಷ ಪ್ರಿಯರು” ಎಂಬ ಸಂಸ್ಥೆ ಆರಂಭ

ನಶಿಸಿ ಹೋಗುತ್ತಿರುವ ಯಕ್ಷಗಾನ ಕಲೆ ಉಳಿಸುವುದರೊಂದಿಗೆ, ಕಲಾವಿಧರಿಗೆ ಆಸರೆಯಾಗಿ ನಿಲ್ಲುವ ನಿಟ್ಟಿನಲ್ಲಿ ಕಾಪುವಿನ ಸಮಾನ ಮನಸ್ಕರು ಸೇರಿ “ಯಕ್ಷ ಪ್ರಿಯರು” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.

ಈ ಬಗ್ಗೆ ಕಾಪು ಮಯೂರ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ, ನಮ್ಮ ತುಳುನಾಡ ಗಂಡುಕಲೆ ಯಕ್ಷಗಾನ ಬಹುತೇಕ ತೆರೆಮರೆಗೆ ಸರಿಯುತ್ತಿರುವ ಈ ಕಾಲಗಟ್ಟದಲ್ಲಿ, ಕಾಪುವಿನಲ್ಲಿ ಯಕ್ಷ ಪ್ರೀಯರು ಎಂಬ ನಾಮಾಂಕಿತದಡಿಯಲ್ಲಿ ಸಂಸ್ಥೆಯೊಂದನ್ನು ಹುಟ್ಟು ಹಾಕಲಾಗಿದ್ದು, ಈ ಸಂಸ್ಥೆಯ ಉದ್ಧೇಶ ವಿಭಿನ್ನವಾಗಿದ್ದು, ಯಕ್ಷಗಾನ ಕಲೆಯನ್ನು ಉಳಿಸುವುದು ಮಾತ್ರವಲ್ಲ ಕಲಾವಿಧರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವುದು ಹಾಗೂ ಯುವ ಪೀಳಿಗೆಗೆ ಯಕ್ಷಗಾನದ ಬಗ್ಗೆ ಒಲವು ಮೂಡಿಸಿ ಅವರಿಗೂ ತರಭೇತು ನೀಡಿ ಕಲಾವಿಧರನ್ನಾಗಿಸುವುದೂ ಆಗಿದೆ ಎಂದರು.
ಆ ನಿಟ್ಟಿನಲ್ಲಿ ಮಾರ್ಚ್ 13ರ ಸಂಜೆ 77 ಗಂಟೆಯಿಂದ 12 ಗಂಟೆಯವರೆಗೆ ಕಾಲ ಮಿತಿಯಲ್ಲಿ ಶ್ರೀ ಮಂಗಳಾ ದೇವಿ ಪ್ರಸಾದಿತ ಯಕ್ಷಗಾನ ಮಂಡಳಿಂದ, ಕಾಪು ಬಂಟರ ಸಂಘದ ಆವರಣದಲ್ಲಿ “ಕಾರಣಿಕದ ಕೊರಗಜ್ಜ” ಎಂಬ ತುಳು ಪೌರಾಣಿಕ ಕಥಾಭಾಗವನ್ನು ಆಡಿತೋರಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅರುಣ್ ಶೆಟ್ಟಿ ಪಾದೂರು, ಸಂತೋಷ ಆರ್ ಶೆಟ್ಟಿ, ರಘರಾಮ ಶೆಟ್ಟಿ, ಪುರುಷೋತ್ತಮ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *