Header Ads
Header Ads
Header Ads
Breaking News

ಕಾಪು ಕಾಂಗ್ರೆಸ್ ವತಿಯಿಂದ ಅನಾಥಶ್ರಮದಲ್ಲಿ ದೀಪಾವಳಿ ಆಚರಣೆ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಸೊರಕೆ

ಕಾಪು ಕಾಂಗ್ರೆಸ್‌ವತಿಯಿಂದ ಶಂಕರಪುರ ವಿಶ್ವಾಸದ ಮನೆಯ ೨೫೦ಕ್ಕೂ ಅಧಿಕ ಅನಾಥ ಮಕ್ಕಳು, ಗಂಡಸರು, ಹೆಂಗಸರಿಗೆ ಸಿಹಿ ಹಂಚಿ ವಸ್ತ್ರ ನೀಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಕಾಪು ಶಾಶಕ ವಿನಯ ಕುಮಾರ್ ಸೊರಕೆ ಚಾಲನೆ ನೀಡಿದ್ದಾರೆ.

ಈ ಸಂಧರ್ಭ ಮಾತನಾಡಿದ ಅವರು, ನಾವು ದೀಪಾವಳಿ ಹಬ್ಬವನ್ನು ಕುಟುಂಬ ಸಮೇತರಾಗಿ ಬಹಳ ಅದ್ಧೂರಿಯಾಗಿ ಆಚರಣೆ ಮಾಡುತ್ತೇವೆ. ಆದರೆ ಯಾವುದೇ ಸಂಬಂಧಿಗಳೇ ಇಲ್ಲದ ಈ ಅನಾಥಶ್ರಮದ ಆಶ್ರಯದಲ್ಲಿರುವ ಸದಸ್ಯರಿಗೆ ಯಾವುದೇ ಹಬ್ಬ ಹರಿದಿನಗಳಿಲ್ಲ. ದೇಶದ ಯಾವುದೇ ಒರ್ವ ಪ್ರಜೆಯೂ ಇಂಥಹ ಹಬ್ಬಗಳನ್ನು ಆಚರಿಸಿದಾಗ ಮಾತ್ರ ಆ ಹಬ್ಬಗಳಿಗೆ ಮೌಲ್ಯ ಬರಲು ಸಾಧ್ಯ, ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕಾಪು ಕಾಂಗ್ರೆಸ್ಸಿನ ಎಲ್ಲಾ ಪದಾಧಿಕಾರಿಗಳನ್ನು ಸೇರಿಸಿಕೊಂಡು ಶಂಕರಪುರದ ಅನಾಥಶ್ರಮದಲ್ಲಿ ಈ ದೀಪಾವಳಿಯ ಪ್ರಥಮ ದಿನವನ್ನು ಬಹಳ ಸಂತೋಷದಿಂದ ಆಚರಿಸಿದ್ದೇವೆ ಎಂದರು.
ಈ ಸಂಧರ್ಭ ಪಕ್ಷದ ಪ್ರಮುಖರಾದ ನವೀನ್‌ಚಂದ್ರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ದೀಪಕ್ ಎರ್ಮಾಳು, ಹರೀಶ್ ನಾಯಕ್, ಗಣೇಶ್ ಕೋಟ್ಯಾನ್, ನಾಗೇಶ್ ಕಾಪು, ಸೌಮ್ಯಾ ಸಂಜೀವ್, ದಿನೇಶ್ ಕೋಟ್ಯಾನ್ ಮುಂತಾದವರಿದ್ದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply