Header Ads
Header Ads
Breaking News

ಕಾಪು ತಾಲೂಕಿಗೆ ತಿಂಗಳಾಂತ್ಯದೊಳಗೆ ಮೂಲ ಸೌಕರ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ..

ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕಂದಾಯ ಇಲಾಖೆಗೆ ಸಂಬಂಧಪಟ್ಟು ಮಾಡಿರುವ ಘೋಷಣೆಗಳನ್ನು ಚುನಾವಣೆಗೆ ಮೊದಲೇ ಈಡೇರಿಸುವ ಜವಾಬ್ದಾರಿ ಸರಕಾರದ್ದಾಗಿದ್ದು ಅದಕ್ಕಾಗಿ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚೆಯನ್ನೂ ನಡೆಸಲಾಗಿದೆ. ಕರಾವಳಿ ಭಾಗದಲ್ಲಿಯೂ ಕಂದಾಯ ಇಲಾಖೆಗೆ ಸಂಬಂಧಪಟ್ಟು ಅತ್ಯವಶ್ಯಕವಾಗಿ ಬಗೆಹರಿಸಲೇ ಬೇಕಾದ ಹಲವು ಸಮಸ್ಯೆಗಳಿದ್ದು, ಆ ಕುರಿತಾಗಿ ಚರ್ಚಿಸಲು ಕರಾವಳಿ ಶಾಸಕರೊಂದಿಗೆ ಒಂದು ವಾರದೊಳಗೆ ವಿಶೇಷ ಸಭೆ ನಡೆಸುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಬುಧವಾರ ಕಾಪು ಬಂಗ್ಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ ನೂತನ ಕಾಪು ತಾಲೂಕು ಉದ್ಘಾಟನೆ, ಅಧಿಕೃತ ಘೋಷಣೆ ಮತ್ತು ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಪುವಿಗೆ ಐಡೆಂಟಿಟಿ ಬರಬೇಕಾದರೆ ತಾಲೂಕು ರಚನೆ ಅಗತ್ಯವಾಗಿ ನಡೆಯಬೇಕಿದೆ ಎಂಬ ಬೇಡಿಕೆಯನ್ನು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಮುಂದಿರಿಸಿದ್ದು, ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂಧನೆ ದೊರಕಿದೆ. ಕಾಪು ತಾಲೂಕು ರಚನೆಯಾಗುತ್ತಲೇ ಸರಕಾರದ ಎಲ್ಲಾ ಕಛೇರಿಗಳೂ ಕಾಪುವಿಗೆ ಬರಲಿದ್ದು, ಇದರಿಂದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಪಾಶಿ, ಕಾಪು ಪುರಸಭಾ ಅಧ್ಯಕ್ಷೆ ಮಾಲಿನಿ, ಕೆಪಿಸಿಸಿ ಕಾರ್ಯದರ್ಶಿಗಳಾದ ಡಾ| ದೇವಿಪ್ರಸಾದ್ ಶೆಟ್ಟಿ, ಡಾ| ರಾಜಶೇಖರ ಕೋಟ್ಯಾನ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ವರದಿ-ಸುರೇಶ್ ಎರ್ಮಾಳ್

Related posts

Leave a Reply