Header Ads
Header Ads
Breaking News

ಕಾಪು ಪೊಲೀಸ್ ಠಾಣೆಗೆ ಮುಸ್ಲಿಂ ಸಂಘಟನೆಗಳ ದಿಢೀರ್ ಮುತ್ತಿಗೆ.. ರಾಜಕೀಯ ಮಧ್ಯಸ್ಥಿಕೆಯಿಂದ ಪ್ರಕರಣ ಸುಖಾಂತ್ಯ..

ಮಜೂರಿನ ಮನೆ ಸಮೀಪ ಯುವಕರು ಸೇರಿ ಗುಂಪು ಸೇರಿ ಸಭೆ ನಡೆಸುತ್ತಿದ್ದ ವೇಳೆ, ಯುವಕರು ನಿಲ್ಲಿಸಿದ ವಾಹನಗಳನ್ನು ತಪಾಸಣೆ ನೆಪದಲ್ಲಿ ಕಾಪು ಎಸ್ಸೈ ಅದರ ದಾಖಲೆ ಪತ್ರಗಳನ್ನು ಠಾಣೆಗೆ ಸಾಗಿಸಿದ್ದಾರೆ ಎಂಬುದಾಗಿ ಆರೋಪಿ, ಮುಸ್ಲಿಂ ಸಂಘಟನೆಗಳ ನೂರಾರು ಮಂದಿ ಸದಸ್ಯರು ಕಾಪು ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಶಾಸಕ ಸೊರಕೆ ಮಾತುಕತೆಯ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್, ಮಜೂರು ಸರ್ಕಲ್ ಬಳಿ ರಾತ್ರಿ ಎಂಟರ ಸುಮಾರಿಗೆ ಯುವಕರ ತಂಡವೊಂದು ಗುಂಪು ಸೇರಿ ಮಾತುಕತೆ ನಡೆಸುತ್ತಿದ್ದ ವೇಳೆ, ಅಲ್ಲಿಗೆ ತೆರಳಿದ ಕಾಪು ಪಿ‌ಎಸ್‌ಐ ನಿತ್ಯಾನಂದ ಗೌಡ, ವಾಹನಗಳನ್ನು ತಪಾಸಣೆ ನಡೆಸಿದ್ದಾರೆ. ಸಂಶಯ ಬರಿತ ವಾಹನಗಳ ದಾಖಲೆಪತ್ರಗಳನ್ನು ಠಾಣೆಗೆ ತಂದಿದ್ದನ್ನು ವಿರೋಧಿಸಿದ ಗುಂಪೊಂದು ಠಾಣೆಗೆ ಮುತ್ತಿಗೆ ಹಾಕಿದೆ. ಅದಲ್ಲದೆ ನಮ್ಮ ಮನೆಯ ಬಳಿಗೆ ಬಂದು ತಪಾಸಣೆಯ ಹೆಸರಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಈ ಪ್ರಕರಣ ಮಾತುಕತೆಯಲ್ಲಿ ಇತ್ಯಾರ್ಥವಾಗಿದೆ ಎಂದರು.

ಹಿಂದೂ ಸಂಘಟನೆಗಳ ಸದಸ್ಯರನ್ನು ಪೊಲೀಸ್ ಕಾರ್ಯಾಚರಣೆಯ ಸಂದರ್ಭ ಜೀಪ್‌ನಲ್ಲಿ ಕೆರೆದುಕೊಂಡು ಹೋಗುತ್ತಿದ್ದಾರೆ ಎಂಬುದಾಗಿ ಪ್ರತಿಭಟನಾಗಾರರು ಆರೋಪಿಸಿದ್ದು, ಇದಕ್ಕೆ ಉತ್ತರಿಸಿದ ಸರ್ಕಲ್ ವಾಹನ ತಪಾಸನೆಯ ವೇಳೆ ಪರಾರಿಯಾಗಲು ಯತ್ನಿಸಿದ ವಾಹನವೊಂದನ್ನು ಬೆನ್ನಟ್ಟಿದಾಗ ವಾಹನಕ್ಕೆ ಲಾಕ್ ಮಾಡಿ ಚಾಲಕ ಪರಾರಿಯಾಗಿದ್ದರಿಂದ, ಅದನ್ನು ತೆರೆಯಲು ಪೊಲೀಸರು ಮ್ಯಾಕನೀಕ್ ಒರ್ವನನ್ನು ಕೆರೆದುಕೊಂಡು ಹೋಗಿದ್ದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಅದರಲ್ಲೂ ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಮುಂದಾಗುವವರನ್ನು ಜೀಪಲ್ಲಿ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗುವುದು ತಪ್ಪಲ್ಲ. ಪೊಲೀಸ್ ಇಲಾಖೆ ಸಮಾಜದ ಉಳಿದು ಬಯಸುವವರೇ ವಿನಃ ಕೆಡುಕು ಬಯಸುವವರಲ್ಲ ಇದನ್ನು ಅರ್ಥ ಮಾಡಿಕೊಳ್ಳ ಬೇಕಾಗಿದೆ ಎಂದಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಪೊಲೀಸರು ಹಾಗೂ ಸಾರ್ವಜನಿಕರು ಒಟ್ಟೋಟ್ಟಾಗಿ ಕಾರ್ಯಚರಿಸಿದಾಗ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಾದ್ಯ. ಇದನ್ನು ಪೊಲೀಸ್ ಇಲಾಖೆಯೂ ತಿಳಿದುಕೊಳ್ಳ ತಕ್ಕದ್ದು, ಸಾರ್ವಜನಿಕರು ಕೂಡಾ ಪೂರಕವಾಗಿ ಬೆಂಬಲಿಸ ಬೇಕಾಗಿದೆ ಎಂದರು.

ಆದರೆ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಯಾವೊಬ್ಬರೂ ಘಟನೆಯ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುವ ಮೂಲಕ, ಈ ಮುತ್ತಿಗೆಯ ಹಿಂದೆ ಯಾವುದೋ ಕಾರ್ಯ ಸಾಧನೆಯನ್ನು ಮಾಡ ಹೊರಟಂತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ವರದಿ-ಸುರೇಶ್ ಎರ್ಮಾಳ್