Header Ads
Breaking News

ಕಾಪು ಮಾರಿಗುಡಿ ಬಳಿ ಸತ್ತ ಕೋಳಿಗಳನ್ನು ಬಿಟ್ಟು ಹೋದ ವ್ಯಾಪಾರಿಗಳು: ಗಬ್ಬೆದ್ದು ನಾರುತ್ತಿದೆ ಪ್ರದೇಶ

ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆದ ಸುಗ್ಗಿ ಮಾರಿಪೂಜೆಯ ಸಂದರ್ಭ, ಏಲಂನಲ್ಲಿ ಪಡೆದ ಅಂಗಡಿಯಲ್ಲಿ ಕೋಳಿ ವ್ಯಾಪಾರ ನಡೆಸಿದ ವ್ಯಾಪಾರಿಗಳು ಹತ್ತಾರು ಸತ್ತ ಕೋಳಿಗಳನ್ನು ಮಾರಿಗುಡಿ ಸಮೀಪದಲ್ಲೇ ಎಸೆದು ಹೋಗಿದ್ದರ ಪರಿಣಾಮ ಅದು ಕೊಳೆತು ಗಬ್ಬೆದ್ದು ನಾರುತ್ತಿದ್ದು ಮಾರಕ ರೋಗಭೀತಿ ಎದುರಿಸುವಂತ್ತಾಗಿದೆ.

ಸಾವಿರಾರು ರೂಪಾಯಿ ನೀಡಿ ತಾತ್ಕಾಲಿಕ ಕೋಳಿಯಂಗಡಿಗಳನ್ನು ಏಲಂ ಮೂಲಕ ಪಡೆದ ಮಂದಿ ಸತ್ತ ಕೋಳಿಗಳನ್ನು ಅಲ್ಲೇ ಉಳಿಸಿ ಹೋದ ಬಗ್ಗೆ ಬಾರಿ ಜನವಿರೋಧ ವ್ಯಕ್ತವಾಗುತ್ತಿದ್ದರೂ, ಈ ವ್ಯಾಪಾರಿಗಳಿಂದ ಸಹಸ್ರಾರು ರೂಪಾಯಿ ಬಾಡಿಗೆ ಪಡೆದ ದೇವಳದ ಆಡಳಿತ ಸಮಿತಿ ಈ ಶುದ್ಧೀಕರಣದ ವ್ಯವಸ್ಥೆ ವಹಿಸಿಕೊಂಡಿದೆಯೇ ಎಂಬ ಮಾತುಗಳು ಕೂಡಾ ಕೇಳಿಬರುತ್ತಿದೆ. ಈ ಬಗ್ಗೆ ಮಾತನಾಡಿದ ಕಾಪು ಪುರಸಭಾಧಿಕಾರಿಗೆ ರಾಯಪ್ಪ, ಕಾಪು ಎಲ್ಲೆಡೆ ರಾತ್ರಿ ಹಗಲೆನ್ನದೆ ನಮ್ಮ ಪುರಸಭೆಯ ಸಿಬ್ಬಂದಿಗಳು ಶುದ್ಧಿಕರಿಸಿದ್ದಾರೆ, ಆದರೆ ನಮ್ಮ ಪುರಸಭಾ ವ್ಯಾಪ್ತಿಯಾಗಿದ್ದರೂ ಹೊಸ ಮಾರಿಗುಡಿಯ ಮುಂಭಾಗದ ಸ್ಥಳದಲ್ಲಿ ಮಾರಿಗುಡಿ ಆಡಳಿತ ಸಮಿತಿಯೇ ಕೋಳಿಯಂಗಡಿಗಳನ್ನು ಏಲಂ ಮೂಲಕ ನೀಡಿದ್ದಾಗಿದೆ, ಕೋಳಿಯಂಗಡಿ ಇರಿಸಿದವರೇ ಆ ಸತ್ತ ಕೋಳಿಗಳನ್ನು ವಿಲೇವಾರಿ ಮಾಡ ಬೇಕಾಗಿತ್ತು ಬಿಟ್ಟು ಹೋಗಿರುವುದು ಸರಿಯಾದ ಕ್ರಮವಲ್ಲ, ಆದರೂ ಇದೀಗ ಉಳಿಸಿ ಹೋದ ಸತ್ತ ಕೋಳಿಗಳು ದುರ್ನಾತ ಬೀರುತ್ತಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗುವ ಹಿನ್ನಲೆಯಲ್ಲಿ ಅದನ್ನು ವಿಲೇವಾರಿ ಮಾಡುವುದಕ್ಕೆ ಮಾರಿಗುಡಿ ಆಡಳಿತ ಸಮಿತಿಯೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *