Header Ads
Breaking News

ಕಾಪು : ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ, ಸವಾರ ಮೃತ್ಯು

ಕಾಪುವಿನ ಮಯೂರ ಹೋಟೆಲ್ ಮುಂಭಾಗದ ಹೆದ್ದಾರಿ ವಿಭಜಕಕ್ಕೆ ಬೈಕೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರು ಎನ್ನಾರ್‌ಪುರ ನಿವಾಸಿ ಹೆಜಮಾಡಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಸುರೇಶ್ ಆಚಾರ್ಯ ಎಂದು ತಿಳಿದು ಬಂದಿದೆ. ಈ ಅಪಘಾತಕ್ಕೆ ಬೈಕ್ ಸವಾರನ ಅತೀ ವೇಗ ಹಾಗೂ ಅಜಾಗರುಕತೆಯ ಚಾಲನೆಯೆ ಕಾರಣ ಎಂಬುದು ಪಕ್ಕದ ಹೋಟೆಲಿನ ಸಿಸಿ ಕ್ಯಾಮಾರದಲ್ಲಿ ಸೆರೆಯಾದ ದೃಶ್ಯವೇ ಸಾಕ್ಷೀ ನುಡಿಯುತ್ತಿದೆ. ಏಕಮುಖ ರಸ್ತೆಯ ತೀರ ಬಲಭಾಗದಲ್ಲಿ ಸಂಚರಿಸುತ್ತಿದ್ದ ಈತ ತಕ್ಷಣ ಬೈಕನ್ನು ಮತ್ತಷ್ಟು ಬಲಕ್ಕೆ ತಿರುಗಿಸಿದಾಗ ರಸ್ತೆ ವಿಭಜಕದಲ್ಲಿದ್ದ ಉಕ್ಕಿನ ಕಂಬವೊಂದಕ್ಕೆ ಡಿಕ್ಕಿಯಾಗಿ ರಸ್ತೆ ವಿಭಜಕದ ಮಧ್ಯೆ ಚಾಲನೆ ಇಲ್ಲದೆ ಬಿದ್ದುಕೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೈನ್ಸ್‌ಗೆ ಕರೆ ಮಾಡಿದರೂ ಅದು ಬರದ ಕಾರಣ, ವಿಳಂಬವಾಗಿ ಅಟೋ ರಿಕ್ಷಾವೊಂದಲ್ಲಿ ಸ್ಥಳೀಯ ಆಸ್ಪತ್ರೆಯೊಂದಕ್ಕೆ ಸಾಗಿಸಿ ಅಲ್ಲಿಂದ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದ. ಈತನ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *