Header Ads
Header Ads
Header Ads
Breaking News

ಕಾಪು ವಲಯ ಫೋಟೋ ಗ್ರಾಫರ್‍ಸ್‌ವತಿಯಿಂದ ಆಶ್ರಮದಲ್ಲಿ ದೀಪಾವಳಿ ಆಚರಣೆ ಮಕ್ಕಳೊಂದಿಗೆ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಫೋಟೋ ಗ್ರಾಫರ್‍ಸ್

ಕಾಪು ವಲಯ ಫೋಟೋ ಗ್ರಾಫರ್‍ಸ್ ಸದಸ್ಯರು ಬಂಟಕಲ್ಲಿನ ಜಯ ಸೃತಿ ಧಾಮ ಆಶ್ರಮದ ಮಕ್ಕಳೊಂದಿಗೆ ಸಿಹಿ ತಿಂಡಿ ವಿನಿಮಯ ಮಾಡಿಕೊಂಡು, ಪಟಾಕಿ ಸಿಡಿಸಿ ದೀಪಾವಳಿಯನ್ನು ಬಹಳ ಅರ್ಥಗರ್ಭಿತವಾಗಿ ಆಚರಿಸಿದ್ದಾರೆ.

ಈ ಸಂಧರ್ಭ ಮಾದ್ಯಮದೊಂದಿಗೆ ಮಾತನಾಡಿದ ಆಶ್ರಮದ ಉಸ್ತುವಾರಿ ನೋಡುತ್ತಿರುವ ದಯಾನಂದ ಸ್ವಾಮಿ, ಯುವಕರ ಕೈಯಲ್ಲಿ ಹಣವಿದ್ದರೆ ದುಂದು ವೆಚ್ಚಗಳತ್ತ ಮನ ಮಾಡುವ ಈ ಕಾಲಘಟ್ಟದಲ್ಲಿ, ಸ್ವಯಂ ಪ್ರೇರಿತರಾಗಿ ಕಾಪು ವಲಯ ಫೋಟೋ ಗ್ರಾಫರ್‍ಸ್ ಸಂಸ್ಥೆಯ ಸದಸ್ಯರು, ಆಶ್ರಮಕ್ಕೆ ಅಕ್ಕಿ, ಹಣ್ಣು ಹಂಪಲು, ತರಕಾರಿ, ತೆಂಗಿನಕಾಯಿ, ಸಿಹಿತಿಡಿ ಮೊದಲಾದುವುಗಳನ್ನು ನೀಡಿ, ಮಕ್ಕಳೊಂದಿಗೆ ಬಹಳಷ್ಟು ಹೊತ್ತು ಶಬ್ದ ರಹಿತ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದು ಬಹಳ ಖುಷಿ ನೀಡಿದೆ. ಮಕ್ಕಳೂ ತಮ್ಮ ಹೆತ್ತವರು ನಮ್ಮ ಹತ್ತಿರ ಇಲ್ಲ ಎಂಬ ಬೇಸರವನ್ನೂ ಕೆಲ ಕಾಲ ಮರೆತಂತ್ತಿತ್ತು. ಮುಂದಿನ ದಿನದಲ್ಲೂ ಇಂಥಹ ಕಾರ್ಯಕ್ರಮಗಳು ಈ ಆಶ್ರಮದಲ್ಲಿ ಹೆಚ್ಚೆಚ್ಚು ನಡೆಯುವಂತ್ತಾಗಲೆಂದರು.

ಕಾಪು ವಲಯ ಫೋಟೋ ಗ್ರಾಫರ್‍ಸ್ ಸಂಸ್ಥೆಯ ಅಧ್ಯಕ್ಷ ಉದಯ ಮುಡ್ಕೂರು ಮಾತನಾಡಿ, ನಮ್ಮ ಮನೆಗಳಲ್ಲಿ ದೀಪಾವಳಿ ಆಚರಣೆಯನ್ನು ಮಾಡುವ ಮೊದಲು, ಹೆತ್ತವರಿಂದ ದೂರವಾಗಿ ಆಶ್ರಮದಲ್ಲಿ ಜೀವನ ನಡೆಸಿ ವಿದ್ಯಾಭ್ಯಾಸ ಮಾಡುತ್ತಿರುವ, ಮಕ್ಕಳಿಗೆ ತಮ್ಮ ಹೆತ್ತವರು ಹತ್ತಿರ ಇಲ್ಲ ಎಂಬ ಕೊರಗನ್ನು ದೂರವಾಗಿಸುವ ನಿಟ್ಟಿನಲ್ಲಿ, ನಮ್ಮಿಂದ ಸಾಧ್ಯವಾದಷ್ಟು ವಸ್ತು ರೂಪದ ಕೊಡುಗೆಗಳನ್ನು ನೀಡಿ ಅವರೊಂದಿಗೆ ದೀಪಾವಳಿಯ ಸವಿಯನ್ನು ಸವಿದ್ದಿದ್ದು, ನಮಗೂ ಸಂತೋಷ ತಂದಿದೆ ಎಂದರು.

ಈ ಸಂದರ್ಭ ಸಂಸ್ಥೆಯ ಪ್ರಮುಖರಾದ ವೀರೇಂದ್ರ ಶಿರ್ವ, ಪ್ರಮೋದ್ ಸುವರ್ಣ, ಪ್ರವೀಣ್ ಕುರ್ಕಾಲು, ಶ್ರೀನಿವಾಸ್ ಐತಾಳ್, ಸಚ್ಚಿನ್ ಉಚ್ಚಿಲ, ಕೃಷ್ಣ ರಾವ್, ವಿನೋದ್ ಕಾಂಚನ್, ಸುರೇಶ್ ಎರ್ಮಾಳ್ ಉಪಸ್ಥಿತರಿದ್ದರು

ವರದಿ-ಸುರೇಶ್ ಎರ್ಮಾಳ್

Related posts

Leave a Reply