Header Ads
Breaking News

ಕಾಪು: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನ್ನು ಆವರಿಸಿದ್ದ ಮುಳ್ಳುಪೊದೆಗೆ ಬೆಂಕಿ, ತಪ್ಪಿದ ದುರಂತ

ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನ್ನು ಆವರಿಸಿದ್ದ ಮುಳ್ಳು ಪೊದೆಗಳಿಗೆ ಬೆಂಗಿ ತಗುಲಿ ಭಾರೀ ಆತಂಕ ಸೃಷ್ಟಿಂದ ಘಟನೆ ಕಾಪು ಪ್ರೆಸ್ ಕ್ಲಬ್‌ನ ಮುಂಭಾಗ ಬಳಿ ಸಂಭವಿಸಿದೆ. ಟ್ರಾನ್ಸ್‌ಫಾರ್ಮರ್‌ನ್ನು ಸುತ್ತುವರಿದಿದ್ದ ಪೊದೆಯನ್ನು ತೆರವುಗೊಳಿಸದ ಪರಿಣಾಮ ವಿದ್ಯುತ್‌ನ ಕಿಡಿ ಹಾರಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರಾದ ಪುಂಡರೀಕ ಮರಾಠೆ ಅವರು, ಮೆಸ್ಕಾಂ ಇಲಾಖೆಯು ಪ್ರತೀ ವಾರ ವಿದ್ಯುತ್ ಲೈನ್ ಸಮಗ್ರ ನಿರ್ವಹಣೆಗಾಗಿ ವಿದ್ಯುತ್ ಕಡಿತಗೊಳಿಸುತ್ತೆ. ಆದರೆ ಕೇವಲ ರಸ್ತೆಯ ಪಕ್ಕದ ಕೆಲವೊಂದು ಮರಗಳ ರೆಂಬೆಗಳನ್ನು, ತೆಂಗಿನ ಗರಿಗಳನ್ನು ಬೇಕಾಬಿಟ್ಟಿ ಕಡಿದು ಹಾಕಿ ರಸ್ತೆಗಳಲ್ಲೇ ಉಳಿಸಿ ಹೋಗುವುದೇ ಲೈನ್ ನಿರ್ವಹಣೆ ಎಂದು ಭಾವಿಸಿದಂತಿದೆ. ಟ್ರಾನ್ಸ್‌ಫಾರ್ಮರ್ ಅಡಿಭಾಗದಲ್ಲಿ ಬೆಳೆದ ಮುಳ್ಳು ಪೊದೆಗಳನ್ನಾಗಲೀ ತೆರವುಗೊಳಿಸುವ ಗೌಜಿಗೆ ಹೋಗುತ್ತಿಲ್ಲ ಎಂದು ಆರೋಪಿಸಿದರು.

Related posts

Leave a Reply

Your email address will not be published. Required fields are marked *