Header Ads
Breaking News

ಕಾಪು ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಕಾಪು ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ನವರಾತ್ರಿಯ ಅಂತಿಮ ದಿನ ಆಯುಧ ಪೂಜೆಯು ಬಹಳ ವಿಜೃಂಬಣೆಯಿಂದ ನೆರವೇರಿದ್ದು, ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಹಿತ ಇತರೇ ಗಣ್ಯರು ಪಾಲ್ಗೊಂಡಿದ್ದರು.

ಜರ್ನಾದನ್ ಭಟ್ ನೇತೃತ್ವದಲ್ಲಿ ಗಣಹೋಮ, ವಾಹನ ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿತು, ಪೂಜೆಯ ಸಂದರ್ಭ ವೃತ್ತ ನಿರೀಕ್ಷಕರ ಕಛೇರಿ ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು, ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಸಹಿತ ಸಿಬ್ಬಂದಿಗಳು ತಾತ್ಕಾಲಿಕವಾಗಿ ಪೊಲೀಸ್ ಸಮವಸ್ತ್ರ ತ್ಯಜಿಸಿ ವಿಭಿನ್ನ ಸಮವಸ್ತ್ರದಿಂದ ಕಂಗೊಳಿಸುತ್ತಿದ್ದರು. ಈ ಸಂದರ್ಭ ಕಾಪು ಪಿಎಸ್‌ಐ ಐ. ರಾಜ್‌ಶೇಖರ್, ಕ್ರೈಂ ಪಿಎಸ್‌ಐ ಜಯಣ್ಣ, ಪಡುಬಿದ್ರಿ ಪಿಎಸ್‌ಐ ಸುಬ್ಬಣ್ಣ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *