Header Ads
Header Ads
Header Ads
Breaking News

ಕಾಪು ಶಾಸಕ ಸೊರಕೆಗೆ ಕಪ್ಪು ಬಾವುಟ ಪ್ರದರ್ಶನ ಹೆಜಮಾಡಿ ಕೋಡಿ ಮಾನಂಪಾಡಿಯಲ್ಲಿ ಘಟನೆ ಮಹಿಳಾ ಸಭಾಂಗಣ ಉದ್ಘಾಟಿಸಲು ಆಗಮಿಸಿದ ಶಾಸಕ ಮೊಗವೀರ ಸಮಾಜದ ಎರಡು ತಂಡಗಳ ಬಿನ್ನಾಭಿಪ್ರಾಯ

ಮಾನಂಪಾಡಿ ಗ್ರಾಮದಲ್ಲಿ ಪಂಚಾಯತ್ ಪರವಾನಿಗೆ ಪಡೆಯದೆ ಅನಧೀಕೃತವಾಗಿ ಗ್ರಾಮ ಸಭೆಯ ಜಾಗದಲ್ಲಿ ಮಹಿಳಾ ಸಭಾ ವತಿಯಿಂದ ನಿರ್ಮಾಣವಾಗಿದ್ದ ಸಭಾಭವನ ಉದ್ಘಾಟಿಸಲು ಆಗಮಿಸಿದ್ದ ಶಾಸಕ ವಿನಯ್ ಕುಮಾರ್ ಸೊರಕೆಯವರಿಗೆ ಗ್ರಾಮಸ್ಥರು ಕಪ್ಪು ಬಾವುಟ ಪ್ರದರ್ಶಿಸಿದ ಘಟನೆ ನಡೆದಿದೆ.

ಉಡುಪಿ ತಾಲೂಕು ಮಾನಂಪಾಡಿ ಹೆಜಮಾಡಿ ಕೋಡಿ ಸಮೀಪ ನಿರ್ಮಿಸಿರುವ ಮಹಿಳಾ ಸಭಾ ಭವನದ ಬಗ್ಗೆ ಮೊಗವೀರ ಸಮಾಜದ ಎರಡು ತಂಡಗಳ ನಡುವೆ ಭಿನ್ನಾಭಿಪ್ರಾಯ ಎದ್ದಿತ್ತು. ಈ ಹಿನ್ನಲೆಯಲ್ಲಿ ಇಂದು ಸಭಾಭವನ ಉದ್ಘಾಟಿಸಲು ಆಗಮಿಸಿದ್ದ ಕಾಪು ಶಾಸಕ ವಿನಯ್ ಕುಮಾರ್‌ಸೊರಕೆಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಅಲ್ಲದೆ. ಗುರಿಕಾರರು ಮತ್ತು 56 ಮಂದಿ ಸದಸ್ಯೆಯರು ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸುವಂತೆ ಮನವಿಯನ್ನು ಸಲ್ಲಿಸಿದರು.

ತದ ಬಳಿಕ ಮಾತನಾಡಿದ ಶಾಸಕರು, ಸಮಾಜವನ್ನು ನಾನು ಇಬ್ಭಾಗ ಮಾಡಲು ಯತ್ನಿಸುತ್ತಿದ್ದೇನೆ ಎಂಬ ಆರೋಪ. ಸುಳ್ಳು. ಹೆಜಮಾಡಿ ಮತ್ತು ಮಾನಂಪಾಡಿ ಎರಡು ಸಮಾಜದೊಳಗಿನ ಭಿನಾಭಿಪ್ರಾಯವೇ ಇದಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಿದರು.

ವರದಿ: ಸುರೇಶ್ ಎರ್ಲಾಳ್

Related posts

Leave a Reply