Header Ads
Header Ads
Header Ads
Breaking News

ಕಾಪು ಶಿರ್ವ ರಸ್ತೆ ಅಗಲೀಕರಣಕ್ಕೆ ಕಾಪು ಶಾಸಕ ಸೊರಕೆ ಚಾಲನೆ ಸಿ.ಆರ್.ಎಫ್. ಅನುದಾನ ಐದು ಕೋಟಿ ರೂಪಾಯಿ ಮಂಜೂರು…

ಸಿ.ಆರ್.ಎಫ್ ಅನುದಾನ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಪು-ಶಿರ್ವ ಸಂಪರ್ಕ ರಸ್ತೆಯ ಅಗಲೀಕರಣ ಕಾಮಗಾರಿಗೆ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಗುದ್ದಲಿ ಪೂಜೆ ನಡೆಸುವ ಮೂಲಕ ಚಾಲನೆ ನೀಡಿದ್ದಾರೆ.

ಆ ಬಳಿಕ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಪೂರಕ ಸಂಪರ್ಕ ರಸ್ತೆಗಳ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಶಿರ್ವ-ಕಾಪು ರಸ್ತೆ ಅಗಲೀಕರಣಕ್ಕೆ ಇಂದು ಚಾಲನೆ ನೀಡಲಾಗಿದ್ದು, ಅದರಂತೆ ನಂದಿಕೂರು-ಶಿರ್ವ, ಅಲೆಯೂರು-ಶಿರ್ವ, ಕಟಪಾಡಿ-ಶಿರ್ವ ಮುಂತಾದ ಎಲ್ಲಾ ರಸ್ತೆಗಳ ಅಗಲೀಕರಣಕ್ಕೆ ಇಷ್ಟರಲ್ಲೇ ಚಾಲನೆ ನೀಡಲಾಗಿದೆ, ಅತೀ ಶೀಘ್ರವಾಗಿ ಕಾಮಗಾರಿ ಆರಂಭಗೊಂಡು ಸಾರ್ವಜನಿಕರ ಊಪಯೋಗಕ್ಕೆ ಸಿಗಲಿದೆ ಎಂದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ಸೌಮ್ಯಾ ಸಂಜೀವ್, ಹರೀಶ್ ನಾಯಕ್, ವಿಶ್ವಾಸ್ ಅಮೀನ್, ಮಾಧವ ಪಾಲನ್ ಮುಂತಾದವರಿದ್ದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply