Header Ads
Breaking News

ಕಾಪು ಹೊಸ ಮಾರಿಗುಡಿ ದೇವಳದಲ್ಲಿ ಸುಗ್ಗಿ ಮಾರಿಪೂಜೆ : ಭಕ್ತಾಧಿಗಳನ್ನು ಸುಲಿಗೆ ಮಾಡಲು ದೇವಳದಿಂದಲೇ ವ್ಯವಸ್ಥೆ

ಕಾಪು ಹೊಸ ಮಾರಿಗುಡಿ ದೇವಳದಲ್ಲಿ ಸುಗ್ಗಿ ಮಾರಿಪೂಜೆ ಸಂದರ್ಭ ಹಣ್ಣು-ಕಾಯಿ ಮಾಡುವ ಭಟ್ರಿಂದ ಹಿಡಿದು..ಕೋಳಿ ಶುದ್ದೀಕರಿಸಿಕೊಡುವ ವ್ಯಕ್ತಿಗಳವರೆಗೂ ಇಷ್ಟೇ ಹಣ ನೀಡುವಂತೆ ಡಿಮ್ಯಾಂಡ್ ಮಾಡುವ ಮೂಲಕ ಭಕ್ತಾಧಿಗಳನ್ನು ಸುಳಿಗೆ ಮಾಡುತ್ತಿದ್ದು, ಈ ಕೃತ್ಯಕ್ಕೆ ದೇವಳದ ಆಡಳಿತ ಸಮಿತಿಯೆ ಕುಮ್ಮಕ್ಕು ನೀಡಿದೆ ಎಂಬುದಾಗಿ ಶ್ರೀಮಾರಿಯಮ್ಮನ ಭಕ್ತಾಧಿಗಳೇ ಸಾರ್ವಜನಿಕವಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಇನ್ನಾ ಕುಶ ಮೊಯಿಲಿ ಎಂಬವರು, ಮಾರಿಯಮ್ಮನ ವಾರ್ಷಿಕ ಜಾತ್ರೆಗೆ ಭಕ್ತಿಯಿಂದ ಆಗಮಿಸುವ ನಮಗೆ ಇಲ್ಲಿನ ವ್ಯವಸ್ಥೆ ಕಂಡು ಬಹಳ ಬೇಸರವಾಗುತ್ತಿದೆ, ದೇವಸ್ಥಾನದ ಒಳಹೋಗಿ ಹಣ್ಣು-ಕಾಯಿ ಮಾಡಲು ಹೋದರೆ ಹಣ್ಣು-ಕಾಯಿ ಮಾಡಿಕೊಡುವವರ ಡಿಮ್ಯಾಂಡ್ ಇಂತಿಷ್ಟೇ ಹಣ ನೀಡುವಂತೆ, ಅಲ್ಲಿಂದ ಹರಕೆಯ ಕೋಳಿ ಕಡಿಯಲು ಹೋದರೆ ಅಲ್ಲೂ ಡಿಮ್ಯಾಂಡ್, ಅಲ್ಲಿಂದ ಕೋಳಿ ಕ್ಲೀನ್ ಮಾಡಲು ಹೋದರೆ ಅಲ್ಲಿ ಸುಲಿಗೆ, ಒಂದು ಕೋಳಿ ಕ್ಲೀನ್ ಮಾಡಲು ಬಿಳಿ ಕೋಳಿಯಾದರೆ ನಲ್ವತ್ತು, ಬಣ್ಣದಾದರೆ ಐವತ್ತು, ಮೊದಲಿಗೆ ಹಣ ನೀಡಿ ಕೂಪನ್ ಮಾಡಿ ಆ ಬಳಿಕ ಕೆಲಸ, ಕೆಲಸದಲ್ಲಾದರೂ ಸ್ವಚ್ಚತೆ ಇದೆಯೇ ಅದೂ ಇಲ್ಲ ಒಂದು ತೊಟ್ಟು ನೀರು ಊಪಯೋಗಿಸದೆ ಕೋಳಿಗಳನ್ನು ಕಟ್ಟ್ ಮಾಡಿಕೊಡುವ ರೀತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ಜನರ ಅಲಸ್ಯವನ್ನು ದುರುಯೋಗ ಪಡಿಸಿಕೊಂಡ ವ್ಯಕ್ತಿಗಳು ಅವರನ್ನು ಸುಲಿಗೆ ಮಾಡಲು ಈ ದಾರಿ ಹಿಡಿದಿರುವುದು ತಪ್ಪಲ್ಲ, ಆದರೆ ಆ ವ್ಯಕ್ತಿಗಳಿಗೆ ದೇವಳದ ಆಡಳಿತ ಸಮಿತಿಯೇ ಬೆಂಬಲ ನೀಡುತ್ತಿರುವುದು ನಮ್ಮ ಮನಸ್ಸಿಗೆ ಗಾಸಿ ಮಾಡಿದೆ ಎನ್ನುತ್ತಾರೆ ಭಕ್ತಾಧಿಗಳು

Related posts

Leave a Reply

Your email address will not be published. Required fields are marked *