Header Ads
Header Ads
Breaking News

ಕಾಫಿ ಕಿಂಗ್ ಇನ್ನು ನೆನಪು ಮಾತ್ರ : ಸಿದ್ಧಾರ್ಥ್ ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಸೋಮವಾರ ರಾತ್ರಿ ನೇತ್ರಾವತಿ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ನಾಡಿನ ಹೆಸರಾಂತ ಉದ್ಯಮಿ ಸಿದ್ದಾರ್ಥ ಅವರ ಶವಸಂಸ್ಕಾರ ಜಿಲ್ಲೆಯ ಚಟ್ಟನಹಳ್ಳಿಯಲ್ಲಿರುವ ಚೇತನಾಹಳ್ಳಿ ಎಸ್ಟೇಟ್ ನಲ್ಲಿ ಇಂದು ಸಂಜೆ 6.30ಕ್ಕೆ ನಡೆಯಲಿದೆ.

ಇನ್ನೊಂದೆಡೆ ಮುಂಜಾನೆ ಸಿದ್ದಾರ್ಥ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ಮೂಡಿಗೆರೆ ತಾಲುಕಿನ ಚಟ್ಟನಹಳ್ಳಿ ಗ್ರಾಮದಲ್ಲಿ ಸೂತಕದ ಛಾಯೆ ಅವರಿಸಿದ್ದು, ಚೇತನಾ ಎಸ್ಟೇಟ್ ನಲ್ಲಿ ಸಿದ್ದಾರ್ಥ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ಮೈಸೂರಿನ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದು, ಈ ನಿಟ್ಟಿನಲ್ಲಿ ಮಗನ ಸಾವಿನ ಸುದ್ದಿಯನ್ನು ಹೇಳಬೇಕೋ ಬೇಡವೋ ಎಂಬ ಬಗ್ಗೆ ಕುಟುಂಬ ವರ್ಗ ಗೊಂದಲಕ್ಕೊಳಗಾಗಿದೆ.
ಶವ ಸಂಸ್ಕಾರಕ್ಕೂ ಮುನ್ನ ಚಿಕ್ಕಮಗಳೂರು ನಗರದಲ್ಲಿರುವ ಎಬಿಸಿ ಕಾಫಿ ಗ್ಲೋಬಲ್ ಲಿ. ಕಂಪೆನಿ ಆವರಣದಲ್ಲಿ ಸಿದ್ದಾರ್ಥ ಅವರ ಪಾರ್ಥಿವ ಅಂತಿಮ ದರ್ಶನ ನಡೆಯಲಿದ್ದು, ಅಂತಿಮ ದರ್ಶನಕ್ಕೆ ಜಿಲ್ಲಾ ಪೊಲೀಸ್  ಇಲಾಖೆ ನೇತೃತ್ವದಲ್ಲಿ ಅಕಲ ಸಿದ್ಧತೆ ಕಾರ್ಯ ಭರದಿಂದ ಸಾಗುತ್ತಿದೆ.

ಅಂತಿಮ ದರ್ಶನಕ್ಕೆ ನಾಡಿನ ಪ್ರಮುಖ ರಾಜಕಾರಣಿಗಳು, ಕಲಾವಿದರು, ಉದ್ಯಮಿಗಳೂ, ಸಿದ್ದಾರ್ಥ ಒಡೆತನದ ಸಂಸ್ಥೆಗಳ ಸಿಬ್ಬಂದಿ, ಕಾರ್ಮಿಕರು ಹಾಗೂ ಸಾವಿರಾರು ಮಂದಿ ಸಾರ್ವಜನಿಕರು ಆಗಮಿಸುವ ಹಿನ್ನೆಯಲ್ಲಿ ವ್ಯವಸ್ಥಿತ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.ಸಿದ್ದಾರ್ಥ ಅವರ ಸಾವಿನ ಹಿನ್ನೆಲೆಯಲ್ಲಿ ನಗರದ ಎಬಿಸಿ ಕಂಪೆನಿ ಸಿಬ್ಬಂದಿ, ಕಾಫಿ ಡೇ, ಅಂಬರ್ ವ್ಯಾಲಿ, ಸೆರಾಯ್ ರೆಸಾರ್ಟ್, ಹೊಟೇಲ್ ಮ್ಯಾನೇಜ್ಮೆಂಟ್ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈಗಾಗಲೆ ಎಬಿಸಿ ಕಂಪೆನಿ ಅವರಣದಲ್ಲಿ ಜಮಾಯಿಸಲಾರಂಭಿಸಿದ್ದಾರೆ.

Related posts

Leave a Reply

Your email address will not be published. Required fields are marked *