Header Ads
Header Ads
Breaking News

ಕಾಮಗಾರಿ ಪೂರ್ಣಗೊಂಡರು ಉದ್ಘಾಟನೆ ಭಾಗ್ಯ ಕಂಡಿಲ್ಲ ಕಾರ್ಕಳದ ಇಂದಿರಾ ಕ್ಯಾಂಟೀನ್

ಕಾರ್ಕಳ : ಕಡಿಮೆ ಬೆಲೆಗೆ ಊಟ ಉಪಹಾರ ಸಿಗುತ್ತದೆ ಎಂದು ಕಾದು ಕುಳಿತ ಕಾರ್ಕಳದ ಜನತೆ ಕಾದು ಕಾದು ಸುಸ್ತಾಗಿದ್ದಾರೆ. ಇಂದೂ ನಾಳೆಯೂ ಆರಂಭಗೊಳ್ಳುತ್ತದೆ ಎನ್ನುವ ಇಂದಿರ ಕ್ಯಾಂಟಿನ್ ಕಾಮಗಾರಿ ಬಹುತೇಕ ಪೂರ್ಣಗೊಂಡರು ಇನ್ನು ಕೂಡ ಉದ್ಘಾಟನೆಗೆ ಸಮಯ ಕೂಡಿ ಬಂದಿಲ್ಲ.ಹಿಂದಿನ ರಾಜ್ಯ ಸರಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟಿನ್ ತಾಲೂಕು ಕೇಂದ್ರದಲ್ಲಿ ಆರಂಭಗೊಳ್ಳುವ ಹಿನ್ನಲೆಯಲ್ಲಿ ಕಾರ್ಕಳ ತಾಲೂಕು ಈ ಅವಕಾಶ ಪಡೆಯಿತು ಕಳೆದ2017ರ ನವಂಬರ್ ತಿಂಗಳಿಂದ ಈ ಕ್ಯಾಂಟಿನ್ ಉದ್ಘಾಟನೆಗೊಳ್ಳುತ್ತದೆ ಎಂದು ಸುದ್ದಿಯಾಗುತ್ತಲೆ ಇದೆ. ಆದರೆ11 ತಿಂಗಳು ಕಳೆದರು ಆ ಭಾಗ್ಯ ಒದಗಲೆ ಇಲ್ಲ.

ಇಂದಿರಾ ಕ್ಯಾಂಟಿನ್ ನಿರ್ಮಾಣದ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಮಳೆಗೆ ಕಟ್ಟಡ ಸೋರುತ್ತದೆ. ಈಗಾಗಲೇ ಹಲವು ದೂರುಗಳು ಬಂದಿದ್ದು ಪರಿಶೀಲನೆ ನಡೆಸಲಾಗಿದೆ. ಆದರೆ ಸೋರುವುದನ್ನು ಮಾತ್ರ ತಡೆಗಟ್ಟಲಾಗದಿದ್ದುದು ಸಮಸ್ಯೆಗೆ ಕಾರಣವಾಗಿದೆ. ಸಂಬಂಧಿಸಿದ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ ಆಳವಡಿಸಿದ ಎಕ್ಸಾಸ್ಟ್ ಪ್ಯಾನ್‌ನಿಂದಾಗಿ ಸೋರುತ್ತದೆ ಎಂಬ ಉತ್ತರ ಕೇಳಿ ಬರುತ್ತಿದೆ. ಕಾರ್ಕಳ ಪುರಸಭೆಯಲ್ಲಿ ಮುಂಗಡ ಕಾಮಗಾರಿ ನಡೆಸಿ ಬಳಿಕ ಟೆಂಡರ್ ಆಹ್ವಾನಿಸಿ ವಾಸ ಮಾಡಲೆಂದು ಇದು ಹೊಸತೇನಲ್ಲ. ಇಲ್ಲಿಯೂ ಅದೇ ನಡೆದು ಹೋಗಿದೆ. ಇಂಟರ್‌ಲಾಕ್ ಆಳವಡಿಸಿ, ವಾಷಿಂಗ್ ಏರಿಯಾ ಶೀಲು ಆಳವಡಿಕೆ ಮುಂತಾದ ಕಾಮಗಾರಿಗೆ ಟೆಂಡರ್ ಸೆ:28 ರಂದು ಆಹ್ವಾನಿಸಲಾಗಿದೆ. ಕಾಮಗಾರಿ ಮುಂಗಡವಾಗಿ ಪೂರ್ಣಗೊಂಡಿದೆ. ಕಾನೂನು ಬಾಹಿರವಾಗಿ ಕಾಮಗಾರಿ ನಡೆದರೂ ಅಧಿಕಾರಿಗಳು ಚಕಾರವೆತ್ತದೆ ಜನತೆ ಕಣ್ಣಿಗೆ ಮಣ್ಣೆರಚಲು ಟೆಂಡರ್ ಆಹ್ವಾನಿಸಿದ್ದಾರೆ. ಒಳ ಒಪ್ಪಂದದ ಮೂಲಕ ಮುಂಗಡ ಕಾಮಗಾರಿ ನಡೆಸಿ ಅವ್ಯವಹಾರವನ್ನು ಒಪ್ಪಿಗೊಂಡಿರುವ ಸತ್ಯ ಇನ್ನು ಗುಟ್ಟಾಗಿ ಉಳಿದಿಲ್ಲ. ಅದಕ್ಕೆ ಈಗಾಗಲೇ ಮುಕ್ತಾಯಗೊಂಡ ಇಂಟರ್ ಲಾಕ್ ಸದ್ಯ ಒದಗಿಸಿದೆ.

Related posts

Leave a Reply