Breaking News

ಕಾಮನ್‌ವೆಲ್ತ್ ಯೂತ್ ಕ್ರೀಡಾಕೂಟ, ಜೂಡೋದಲ್ಲಿ ಹರಿಯಾಣದ ಸೋನಿಗೆ ಚಿನ್ನ

ಭಾರತದ ಜೂನಿಯರ್ ತಂಡ ಕಾಮನ್ವೆಲ್ತ್ ಯೂತ್ ಕ್ರೀಡಾಕೂಟದ ಜೂಡೊ ವಿಭಾಗದಲ್ಲಿ ಒಂದು ಚಿನ್ನ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
ಹರಿಯಾಣದ ಸೋನಿ ೭೩ ಕೆಜಿ ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. ಫೈನಲ್ನಲ್ಲಿ ಸೋನಿ ಆಸ್ಟ್ರೇಲಿಯಾದ ನಿಕೊಲಿಕ್ ವಿರುದ್ಧ ಜಯ ದಾಖಲಿಸಿದರು. ೬೦ ಕೆಜಿ ವಿಭಾಗದಲ್ಲಿ ಆಶಿಶ್ ಕಂಚು ಜಯಸಿದರು. ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಆಶಿಶ್ ಇಂಗ್ಲೆಂಡ್ನ ಜೈನ್ ಪ್ರೊಸರ್ ಮೇಲೆ ಗೆದ್ದರು. ಮಧ್ಯ ಪ್ರದೇಶದ ಅಂತಿಮ್ ಯಾದವ್ ೪೮ ಕೆಜಿ ವಿಭಾಗದಲ್ಲಿ ಕಂಚು ಜಯಿಸಿದರು. ಈ ಆಟಗಾರ ರುಸೆಲ್ ಜಾಸ್ಮಿನ್ ಮೇಲೆ ಜಯ ದಾಖಲಿಸುವ ಮೂಲಕ ಮೂರನೇ ಸ್ಥಾನ ಗಳಿಸಿದರು. ಮಣಿಪುರದ ರೆಬಿನಾ ದೇವಿ ಚಾನಮ್ ೫೭ ಕೆಜಿ ವಿಭಾಗದಲ್ಲಿ ಕಂಚು ಗೆದ್ದರು. ಆಸ್ಟ್ರೇಲಿಯಾದ ಸಸ್ಕಿಯಾ ಮೇಲೆ ಅವರು ಗೆಲುವು ಪಡೆದರು.

Related posts

Leave a Reply