Header Ads
Header Ads
Breaking News

ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಗುರುರಾಜ್‌ಗೆ ಬೆಳ್ಳಿ ವೇಟ್ ಲಿಪ್ಟಿಂಗ್‌ನಲ್ಲಿ ಬೆಳ್ಳಿ ಪಡೆದ ಕುಂದಾಪುರದ ಯುವಕ ಗುರುರಾಜ್ ಮನೆಯಲ್ಲಿ ಸಂಭ್ರಮದ ವಾತಾವರಣ

ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ 21ನೆಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕುಂದಾಪುರದ ಗುರುರಾಜ್ ಪೂಜಾರಿ ವೆಯ್ಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಪದಕಗಳ ಖಾತೆ ತೆರೆದಿದ್ದಾರೆ. 56 ಕೆಜಿ ವಿಭಾಗದಲ್ಲಿ 25 ವರ್ಷದ ಗುರುರಾಜ್ ಪೂಜಾರಿ ಈ ಸಾಧನೆ ಮಾಡಿ ಭಾರತದ ಪದಕಗಳ ಪಟ್ಟಿಗೆ ಮೊದಲ ಪದಕವನ್ನು ಕಾಣಿಕೆ ನೀಡಿದ್ದಾರೆ. ಬಡತನದಲ್ಲಿ ಹುಟ್ಟಿ ಈತ ಮಾಡಿರುವ ಸಾಧನೆಗೆ ಊರಿಗೆ ಊರೇ ಹೆಮ್ಮೆ ಪಡುತ್ತಿದೆ.

ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕುಂದಾಪುರದ ಯುವಕ ದೇಶಕ್ಕೇ ಹೆಮ್ಮೆ ತಂದಿದ್ದಾನೆ. ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ವಂಡ್ಸೆ ನಿವಾಸಿ ಮಹಾಬಲ ಪೂಜಾರಿ ಮತ್ತು ಪದ್ಧು ಪೂಜಾರಿಯವರ ಮಗ ಗುರುರಾಜ್ 56 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಭಾರತದ ಪದಕದ ಪಟ್ಟಿಗೆ ಮೊದಲ ಕಾಣಿಕೆ ನೀಡಿದ್ದಾರೆ.ಅಸ್ಸಾಂನ ಗುವಾಹಟಿಯಲ್ಲಿ ನಡೆದ 12 ನೇ ಸೌತ್ ಏಷ್ಯಾ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ಧ ಗುರುರಾಜ್ 56 ಕೆ.ಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವುದರ ಮೂಲಕ ದೇಶದ ಕೀರ್ತಿಯನ್ನು ಗಗನದೆತ್ತರಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದರು. ಇವನ ಈ ಸಾಧನೆಗೆ ಕಳೆದ ತಿಂಗಳು ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿ ಪ್ರಕಟಿಸಿತ್ತು. ಗುರುರಾಜ್ ಓದಿನ