Header Ads
Header Ads
Header Ads
Breaking News

ಕಾಯಕಲ್ಪಕ್ಕಾಗಿ ಕಾಯುತ್ತಿದೆ ಸುಳ್ಯದ ಗುರುಭವನ ಇದೀಗ ಮೂಲೆಗುಂಪಾದ ಗುರುಭವನ ಸಂಪೂರ್ಣ ಅವ್ಯವಸ್ಥೆಯಲ್ಲಿ ಆಗರದಲ್ಲಿರುವ ಕಟ್ಟಡ

 

ಕಳೆದ 40ವರ್ಷದ ಹಿಂದೆ ನಿರ್ಮಿಸಿದ್ದ ಸುಳ್ಯದ ಗುರುಭವನ ಸಂಪೂರ್ಣ ಅವನತಿಯತ್ತ ಸಾಗುತ್ತಿದೆ. ಶಾಲೆಯ ಪಠ್ಯ ಪುಸ್ತಕಗಳು ಸಮವಸ್ತ್ರಗಳು, ಸೈಕಲ್ ಇತರ ವಸ್ತುಗಳನ್ನು ಸಂಗ್ರಹಿಸಿ ಇಡಲಾಗುತ್ತಿದ್ದ ಈ ಗುರುಭವನ ಸಂಪೂರ್ಣ ಹದಗೆಟ್ಟಿದ್ದು ಶಿಕ್ಷಕರಲ್ಲಿ ನೋವುಂಟು ಮಾಡಿದೆ,

ಸುಳ್ಯದ ಗರುಭವನ ನಾದುರಸ್ತಿಯಲ್ಲಿದ್ದು ಹಲವಾರು ವರ್ಷಗಳಿಂದ ಕಾಯಕಲ್ಪಕ್ಕಾಗಿನ ಕಾಯುತ್ತಿದೆ.ಸುಳ್ಯದ ಎ.ಪಿ.ಎಂ.ಸಿ ಬಳಿ ಸುಮಾರು 40 ವರ್ಷಗಳ ಹಿಂದೆ ಗರುರುಭವನವನ್ನು ನಿರ್ಮಿಸಲಾಗಿದೆ.ಗರುಭವನ ಇದು ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿನದಲ್ಲಿದ್ದು ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಹೆಸರಿನಲ್ಲಿದೆ. ಗುರುಭವನ ಸುಮಾರು 20 ವರ್ಷಗಳ ಹಿಂದೆ ಸುಳ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಒಂದು ಮುಖ್ಯ ತಾಣವಾಗಿತ್ತು.ಬರ ಬರುತ್ತ ಅಲ್ಲಲ್ಲಿ ಹಾಲ್ ಕಲ್ಯಾಣ ಮಂಟಗಳು ನಿರ್ಮಾಣಗೊಂಡ ಪರಿಣಾಮ ಗರುಭವನ ಈಗ ಮೂಲೆಗುಂಪಾಗಿದೆ.
ಗರುಭವನದ ಅರ್ದಭಾಗಕ್ಕೆ ಹಾಕಲಾಗಿದೆ.ಇನ್ನು ಅರ್ಧ ಭಾಗಕ್ಕೆ ಸಿಮೆಂಟ್ ಸೀಟ್ ಹಾಕಲಾಗಿದೆ. ಸ್ಲ್ಯಾಬ್ ಸೋರುತ್ತಿದೆ. ಸೀಟ್‌ಗಳು ಅಲ್ಲಲ್ಲಿ ಒಡೆದು ನಿಂತಿದೆ.ಪರಿಣಾಮವಾಗಿ ಮಳೆ ನೀರು ಹಾಲ್‌ನ ಒಳಗಡೆ ಹರಿಯುತ್ತಿದೆ.ಹೆಚ್ಚು ಸೋರುತ್ತಿರುವ ಭಾಗಕ್ಕೆ ಈಗ ಪ್ಲಾಸ್ಟಿಕ್ ಹಾಕಿ ಮುಚ್ಚಲಾಗಿದೆ.ಗರುಭವನ ರಸ್ತೆಯಿಂದ ತಗ್ಗಿನ ಭಾಗದಲ್ಲಿರುವ ಪರಿಣಾಮ ರಸ್ತೆಯ ಮಳೆ ನೀರು ಈ ಕಟ್ಟಡದ ಒಳಗಡೆ ಹರಿಯುತ್ತಿದೆ.ನಾಲ್ಕೈದು ವರ್ಷಗಳ ಹಿಂದೆ ಗರುಭವನಕ್ಕೆ ಕಾಯಕಲ್ಪ ನೀಡುವಂತೆ ಶಿಕ್ಷಕ ಸಂಘದವರು ಶಿಕ್ಷಣ ಇಲಾಖೆಯವರು ಸಭೆ ಸೇರಿ ಚರ್ಚಿಸಿ ಸರಕಾರದ ಅದನ್ನು ಕೇಳುವಂತೆ ನಿರ್ಧಾರಿಸಿದ್ದರು.ಆದರೆ ಅನುದಾನ ದೊಡ್ಡ ಮೊತ್ತ ಆದ ಕಾರಣ ಮಂಜುರಾತಿಯಾಗಿಲ್ಲ.ಈಗ ಗುರುಭನ ಶಿಕ್ಞಣ ಇಲಾಖೆಯ ಗೋಡನ್ ಆಗಿ ಪರಿವರ್ತನೆಯಾಗುತ್ತಿದೆ.ಇಲ್ಲಿ ಶಾಲಾ ಪಠ್ಯ ಪುಸ್ತಕಗಳು ಸಮವಸ್ತ್ರಗಳು,ಸೈಕಲ್ ಇತರ ವಸ್ತುಗಳನ್ನು ಸಂಗ್ರಹಿಸಿ ಇಡಲಾಗುತ್ತದೆ.ಒಂದು ಕಾಲದಲ್ಲಿ ಸಾರ್ವಜನಿಕರು ಸೇರುವ ಈ ಸ್ಥಳ ಈಗ ಕೇವಲ ಗೋಡನ್ ಆಗಿ ಕಟ್ಟಡ ಅವನತ್ತಿಯತ್ತ ಸಾಗುತ್ತಿರುವುದು ಶಿಕ್ಷಕರಲ್ಲಿ ಶಿಕ್ಷರ ಪ್ರೇಮಿಗಳಲ್ಲಿ ನೋವುಂಟು ಮಾಡಿದೆ.ಈಗಿನ ಗುರುಭವನವನ್ನು ಸಂಪೂರ್ಣ ಕೆಡವಿ ಅದೇ ಸ್ಥಳದಲ್ಲಿ ನೂತನ ಗರುಭವನ ನಿರ್ಮಾಣ ಮಾಡುವ ಬಗ್ಗೆ ಶಿಕ್ಷಕರ ಸಂಘ ಅಲೋಚಿಸುತ್ತಿದ್ದು ಅನುದಾನ ಇಲ್ಲದಿರುವುದೇ ಸಮಸ್ಯೆಯಾಗಿ ಪರಿಣಮಿಸಿದೆ.

ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿನದಲ್ಲಿದೆ.ಇದಕ್ಕೆ ಶಿಕ್ಷಕರ ಸಂಘದ ಒಂದು ಕಮಿಟಿ ಇದೆ. ಇದರ ಅರ್ಧಭಾಗ ಸೀಟು ಹಾಕಿ ಇರುವಂತದು .ಇನ್ನು ಅರ್ಧ ಭಾಗ ಆರ್.ಸಿ.ಸಿ.ಇದು ಈಗ ಉಪಯೋಗ ಆಗದಿರುವುದರಿಂದ ಶಿಕ್ಷಣ ಇಲಾಖೆಯ ಪುಸ್ತಕ,ಸೈಕಲ್ ಸಮಸ್ತ್ರ ಹಾಕಲು ಉಪಯೋಗ ಮಾಡುತ್ತಿದ್ದೇವೆ.ಇದನ್ನು ಪೂರ್ಣವಾಗಿ ಕೆಡವಿವಿಯೇ ಇನ್ನು ನೂತನ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ.ಇದಕ್ಕೆ ಸಾಕಷ್ಟು ಅನುದಾನದ ಅಗತ್ಯ ಇದೆ.ನಮಗೆ ಗೋಡನ್ ಸಮಸ್ಯೆಯೂ ಇದೆ.ನಾವು ಈಗಾಗಲೇ ಗೋಡನ್ ನಿರ್ಮಾಣಕ್ಕೆ ಶಾಸಕರಲ್ಲಿ ಅನುದಾನ ಕೇಳಿಕೊಂಡಿದ್ದೇವೆ.ಇದರ ಬಳಕೆ ಕಡಿಮೆಯಾಗುತ್ತಿರುವುದರಿಂದ ಕರೆಂಟ್ ಬಿಲ್ ನೀರು ಬಿಲ್ ಕೂಡ ಕಟ್ಟಲು ಸಮಸ್ಯೆಯಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ೪೦ ವರ್ಷದ ಹಿಂದೆ ನಿರ್ಮಿಸಿದ್ದ ಸುಳ್ಯದ ಗುರುಭವನ ಅವನತಿಯತ್ತ ಸಾಗಿತ್ತಿದ್ದು ಇದಕ್ಕೆ ಕಾಯಕಲ್ಪದ ಅವಶ್ಯಕತೆ ಇದೆ.
ವರದಿ: ತೇಜೇಶ್ವರ್ ಸುಳ್ಯ

Related posts

Leave a Reply