Header Ads
Breaking News

ಕಾರಿನಲ್ಲಿ ಮಾರಕಾಯುಧಗಳ ಸಾಗಾಟ: ಅಪ್ರಾಪ್ತರ ಸಹಿತ ಇಬ್ಬರ ಸೆರೆ!

ಕಾರಿನಲ್ಲಿ ಮಾರಕಾಯುಧಗಳನ್ನು ಸಾಗಿಸುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ಇಬ್ಬರನ್ನು ಸೆರೆ ಹಿಡಿದ ಮಂಜೇಶ್ವರ ಪೋಲಿಸರು ಕಾರನ್ನು ಹಾಗೂ ಮಾರಕಾಯುಧಗಳನ್ನು ವಶಕ್ಕೆ ತೆಗೆದಿದ್ದಾರೆ. ಮಂಜೇಶ್ವರ ಪೊಲೀಸರು ಉಪ್ಪಳದಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಮಧ್ಯೆ ಕೈಕಂಬದಿಂದ ಪೈವಳಿಕೆ ಭಾಗಕ್ಕೆ ತೆರಳುತಿದ್ದ ಕಾರೊ೦ದನ್ನು ತಪಾಸಣೆ ನಡೆಸುತ್ತಿರುವಾಗ ತಲ್ವಾರು ಸೇರಿದಂತೆ ಕಾರಿನಲ್ಲಿ ಮಾರಕಾಯುಧಗಳು ಪತ್ತೆಯಾಗಿವೆ. ಈ ಸಂಬಂಧ ಕಾರಿನಲ್ಲಿದ್ದ ಉಪ್ಪಳ ನಿವಾಸಿ ತೌಸೀಫ್ (19) ಹಾಗೂ ಇನ್ನೊಬ್ಬ ಅಪ್ರಾಪ್ತ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದು ಬಂಧಿಸಿದ್ದಾರೆ.

Related posts

Leave a Reply

Your email address will not be published. Required fields are marked *