Header Ads
Breaking News

ಕಾರಿನಲ್ಲಿ ಸೈಡ್ ಕೊಡುವ ವಿಚಾರಕ್ಕೆ ಜಗಳ : ಬಂಟ್ವಾಳದ ಪೆರುವಾಯಿಯಲ್ಲಿ ನಡೆದ ಘಟನೆ

ಕಾರಿನಲ್ಲಿ ಸೈಡ್ ಕೊಡುವ ವಿಚಾರಕ್ಕೆ ಸಂಬಂಧಿಸಿ ಎದುರಿನಿಂದ ಬಂದ ಕಾರಿನವರ ಜೊತೆ ನಟಿಯೊಬ್ಬರು ಜಗಳ ಮಾಡಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಮತ್ತು ತುಳು ಚಿತ್ರಗಳ ನಾಯಕ ನಟಿ ಶೋಭಿತಾ ಸುದ್ದಿಯಾಗಿದ್ದಾರೆ. ವಾಹನಕ್ಕೆ ಸೈಡ್ ಕೊಡೋ ವಿಚಾರವಾಗಿ, ಶೋಭಿತಾ ಕಾರ್ ಚಾಲಕನ ಜೊತೆ ನಡುರಸ್ತೆಯಲ್ಲೇ ಕೈ ಕೈ ಮಿಲಾಯಿಸಿದ್ದಾರೆ. ಶೋಭಿತಾ ಬಂಟ್ವಾಳದಿಂದ ಮಂಗಳೂರು ಕಡೆ ಹೋಗುವಾಗ, ಎದುರಿನಿಂದ ಬರುತ್ತಿದ್ದ ಸ್ಥಳಿಯರೊಬ್ಬರ ಕಾರಿಗೆ ಸೈಡ್ ನೀಡಲಿಲ್ಲವಂತೆ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳ ಮಿತಿ ಮೀರಿ, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ನಡುರಸ್ತೆಯಲ್ಲೇ ಎರಡೂ ಕಡೆಯವರು ಪರಸ್ಪರ ತಳ್ಳಾಡಿದ್ದಾರೆ. ಈ ವೇಳೆ ಸ್ಥಳೀಯರು ಜಗಳದ ವಿಡಿಯೋ ಮಾಡಿಕೊಂಡಿದ್ದರು. ಫೆ.10 ರಂದು ಗಲಾಟೆ ನಡೆದಿತ್ತು. ಈಗ ವೈರಲ್ ಆಗಿದೆ. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related posts

Leave a Reply

Your email address will not be published. Required fields are marked *